ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಭದ್ರತಾ ನೆರವು ಕಡಿತಗೊಳಿಸಿದ್ದರೂ ಪಾಕ್ ವರ್ತನೆಯಲ್ಲಿ ನಿರ್ಣಾಯಕ ಬದಲಾವಣೆ ಕಾಣುತ್ತಿಲ್ಲ: ಅಮೆರಿಕಾ

ಪಾಕಿಸ್ತಾನಕ್ಕೆ ನೀಡುತ್ತಿದ್ದ ಎರಡು ಬಿಲಿಯನ್ ಡಾಲರ್ ಭದ್ರತಾ ನೆರವು ಕಡಿತಗೊಳಿಸಿದ್ದರೂ ಪಾಕಿಸ್ತಾನ ವರ್ತನೆಯಲ್ಲಿ ನಿರ್ಣಾಯಕವಾದ ಬದಲಾವಣೆಯಲ್ಲಿ ಎಂದು ಅಮೆರಿಕಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನದ ಅಧ್ಯಕ್ಷ ಶಹಿದ್ ಖಾಕ್ವನ್ ಅಬ್ಬಾಸಿ
Nagaraja AB
Updated On : 6 Mar 2018, 4:07 am

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ನೀಡುತ್ತಿದ್ದ ಎರಡು  ಬಿಲಿಯನ್ ಡಾಲರ್  ಭದ್ರತಾ ನೆರವು ಕಡಿತಗೊಳಿಸಿದ್ದರೂ  ಪಾಕಿಸ್ತಾನ ವರ್ತನೆಯಲ್ಲಿ ಬದಲಾವಣೆಯಲ್ಲಿ ಎಂದು ಅಮೆರಿಕಾದ  ಅಧಿಕಾರಿಯೊಬ್ಬರು ಹೇಳಿದ್ದಾರೆ.


 ತಾಲಿಬಾನ್  ಉಗ್ರರಿಗೆ  ನೆರವು ನೀಡುವಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸುತ್ತಿದ್ದು, ಆ ದೇಶದ ವರ್ತನೆಯಲ್ಲಿ ಅಂತಹ ಬದಲಾವಣೆಯೇನೂ ಕಂಡಿಲ್ಲ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾ ರಾಜ್ಯಗಳ ಒಕ್ಕೂಟದ ಪ್ರಧಾನ ಮುಖ್ಯ ಸಹಾಯಕ ಕಾರ್ಯದರ್ಶಿ ಅಲೈಸ್  ವೆಲ್  ಅಭಿಪ್ರಾಯಪಟ್ಟಿದ್ದಾರೆ.

 ಅಫ್ಘಾನಿಸ್ತಾನದ ಕಾಬೂಲಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಯಲ್ಲೂ ಪಾಕಿಸ್ತಾನ ಮುಖ್ಯ
ಪಾತ್ರ ವಹಿಸುತ್ತಿದೆ .ರಾಜಕೀಯ ಸಮಸ್ಯೆ ಇತ್ಯರ್ಥಕ್ಕಾಗಿ ಪಾಕಿಸ್ತಾನ ತಾಲಿಬಾನ್ ನೊಂದಿಗೆ ಮಾತುಕತೆ ನಡೆಸಲು ನೆರವಾಗಲಿದೆ ಎಂಬ ನಂಬಿಕೆ ಹೊಂದಿರುವುದಾಗಿ ಅವರು ತಿಳಿಸಿದರು.

ಮಾತುಕತೆ ಮೂಲಕ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲು ಪ್ರಯತ್ನಿಸಲಾಗುತ್ತಿದೆ.ತಾಲಿಬಾನ್  ಉಗ್ರರ ಮೇಲೆ ಸೇನಾ ಒತ್ತಡ ಹೇರುವ ನಿಟ್ಟಿನಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳು ಕಾರ್ಯತಂತ್ರ ರೂಪಿಸುತ್ತಿವೆ ಎಂದು ಹೇಳಿದರು.

ಈ ಮಾತುಕತೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಬರುವುದನ್ನು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement