ಸ್ಟೇರಿಂಗ್ ಹಿಡಿದ ಸೌದಿ ಮಹಿಳೆ, ಹೊಸ ಸ್ವಾಂತಂತ್ರ್ಯದ ಟೆಸ್ಟ್-ಡ್ರೈವಿಂಗ್
ಸೌದಿ ಅರೇಬಿಯಾದಲ್ಲಿ ಜೂನ್ ನಿಂದ ಮಹಿಳೆಯರಿಗೆ ವಾಹನ ಚಲಾಯಿಸಲು ಕಾನೂನು ಪ್ರಕಾರ ಅವಕಾಶ ನೀಡಲಾಗಿದ್ದು, ...
ಜಿದ್ದಾಹ್: ಸೌದಿ ಅರೇಬಿಯಾದಲ್ಲಿ ಜೂನ್ ನಿಂದ ಮಹಿಳೆಯರಿಗೆ ವಾಹನ ಚಲಾಯಿಸಲು ಕಾನೂನು ಪ್ರಕಾರ ಅವಕಾಶ ನೀಡಲಾಗಿದ್ದು, ಲಕ್ಷಾಂತರ ಸೌದಿ ಮಹಿಳೆಯರು ಚಾಲನ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದಾರೆ ಮತ್ತು ವಾಹನ ಚಾಲನೆಯ ತರಬೇತಿ ಪಡೆಯಲು ಆರಂಭಿಸಿದ್ದಾರೆ.
ಒಂದು ಸಣ್ಣ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಓಡಿಸಲು ನನಗೆ ಹಿಂಚರಿಕೆಯಾಗುತ್ತದೆ. ಇಕ್ಕಟ್ಟು ಸ್ಥಳಗಳಲ್ಲಿ ನಿಶಕ್ತಳಾಗುತ್ತೇನೆ ಎಂದು ಚಾಲನೆಯ ತರಬೇತಿ ಪಡೆಯುತ್ತಿರುವ 30 ವರ್ಷದ ಫಾತಿಮಾ ಸಲೇಂ ಅವರು ಹೇಳಿಕೊಂಡಿದ್ದಾರೆ.
ಇಟಾಲಿಯನ್ ಮಾಜಿ ರೇಸ್ಕಾರ್ ಡ್ರೈವರ್ ಫ್ರಾನ್ಸೆಸ್ಕಾ ಪಾರ್ಡಿನಿ ನನಗೆ ಧೈರ್ಯ ತುಂಬಿ, ಸಮಾಧಾನವಾಗಿ ಕನ್ನಡಿ ನೋಡಿಕೊಂಡು ವಾಹನವನ್ನು ಪಾರ್ಕ್ ಮಾಡಬೇಕು ಮತ್ತು ಬಕಲ್ ಅಪ್ ಮಾಡಲು ನೆನಪಿಸುತ್ತಾನೆ ಎಂದು ಫಾತಿಮಾ ತಿಳಿಸಿದ್ದಾರೆ.
ಸೌದಿ ಸರ್ಕಾರ ಕಳೆದ ವರ್ಷ ಮಹಿಳೆಯರಿಗೆ ವಿಧಿಸಿದ್ದ ಚಾಲನಾ ನಿರ್ಬಂಧವನ್ನು ತೆರವುಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಹೊಸ ಕಾಯ್ದೆಯು 2018ರ ಜೂನ್ನಿಂದ ಅನ್ವಯವಾಗಲಿದೆ.
ನಿರ್ಬಂಧದ ವಿರುದ್ಧ ಮಹಿಳಾ ಕಾರ್ಯಕರ್ತರ ದೀರ್ಘ ಹೋರಾಟದ ಫಲವಾಗಿ ಈಗ ಚಾಲನಾ ಪ್ರಿಯ ಮಹಿಳೆಯರ ಕೈಗೆ ಸ್ಟೇರಿಂಗ್ ಬಂದಿದ್ದು, ಕಾರ್ಯಕರ್ತೆಯರಲ್ಲಿ ಉಲ್ಲಾಸ ಮೂಡಿಸಿದೆ. ನಿಷೇಧವನ್ನು ಟೀಕಿಸಿದ್ದ ಅನೇಕ ಕಾರ್ಯಕರ್ತೆಯರು ಸೆರೆವಾಸವನ್ನೂ ಅನುಭವಿಸಿದ್ದರು.
ವಿದೇಶಿ ಚಾಲಕರು ಮತ್ತು ಆ್ಯಪ್ ಆಧಾರಿತ ವಾಹನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದ ಮಹಿಳೆಯರು ಸಾಮಾಜಿಕವಾಗಿ ಸ್ವಾವಲಂಬಿಗಳಾಗಲು ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ನೀತಿ ಒತ್ತು ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.