ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಸ್ಪೇನ್ ನ ಮೊದಲ ಸ್ತ್ರೀವಾದಿ ಪ್ರತಿಭಟನೆಯಲ್ಲಿ ಐದು ಮಿಲಿಯನ್ ಮಹಿಳೆಯರು ಭಾಗಿ

ವೇತನ ತಾರತಮ್ಯ, ಮುಂದುವರೆದ ಭೇದಭಾವ ಮತ್ತು ಪುರುಷರ ಹಿಂಸಾಚಾರ ಖಂಡಿಸಿ ಸ್ಪೇನ್ ನಲ್ಲಿ ಗುರುವಾರ ...

ಪ್ರತಿಭಟನೆಯಲ್ಲಿ ಭಾಗವಹಿಸಿರುವ ಮಹಿಳೆಯರು
Lingaraj Badiger
Updated On : 8 Mar 2018, 9:46 am
ಮ್ಯಾಡ್ರಿಡ್: ವೇತನ ತಾರತಮ್ಯ, ಮುಂದುವರೆದ ಭೇದಭಾವ ಮತ್ತು ಪುರುಷರ ಹಿಂಸಾಚಾರ ಖಂಡಿಸಿ ಸ್ಪೇನ್ ನಲ್ಲಿ ಗುರುವಾರ ನಡೆದ ಮೊದಲ ಸ್ತ್ರೀವಾದಿ ಬೃಹತ್ ಪ್ರತಿಭಟನೆ ವಿಶ್ವ ಮಹಿಳಾ ದಿನಕ್ಕೆ ಸಾಕ್ಷಿಯಾಗಿದ್ದು, ಈ ಮುಷ್ಕರದಲ್ಲಿ ಸ್ಪೇನಾದ್ಯಂತ ಸುಮಾರು 5 ದಶಲಕ್ಷ ಮಹಿಳೆಯರು ಭಾಗವಹಿಸಿದ್ದರು.
ದೇಶಾದ್ಯಂತ ನಡೆದ ಮೊದಲ ಸ್ತ್ರೀವಾದಿ ಮುಷ್ಕರದಲ್ಲಿ ನಗರ ಹಾಗೂ ಪಟ್ಟಣಗಳಿಂದ 5.3 ದಶಲಕ್ಷ ಮಹಿಳೆಯರು ಭಾಗವಹಿಸಿದ್ದರು ಎಂದು ಕಾರ್ಮಿಕ ಸಾಮಾನ್ಯ ಸಂಘ ಮತ್ತು ಕಾರ್ಮಿಕರ ಆಯೋಗ ವರದಿ ಮಾಡಿದೆ.
ಸ್ಪೇನ್ ನಲ್ಲಿ ಮಹಿಳೆಯರು ಪುರುಷರಿಗಿಂತ ಸರಾಸರಿ ಶೇ.22.9ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ ಮತ್ತು 2003ರಿಂದ ಇದುವರೆಗೆ ಗೃಹ ಹಿಂಸೆಯಲ್ಲಿ 924 ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಇದನ್ನು ಖಂಡಿಸಿ ಇಂದು ಸ್ಪೇನ್ ಮಹಿಳೆಯರು ಬೀಗಿಗಿಳಿದು ಪ್ರತಿಭಟನೆ ಮಾಡಿದರು.

Advertisement

Advertisement

ಜಗತ್ತಿನಾದ್ಯಂತ ಸ್ಪೇನ್ ಮಹಿಳೆಯರ ಈ ಪ್ರತಿಭಟನೆಯನ್ನು ಸ್ತ್ರೀವಾದಿ ಹೋರಾಟ ಎಂದು ಕರೆದಿದ್ದು, ಮುಷ್ಕರ ಮುಂದುವರೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments