ವಿಮಾನ ಪತನವಾದ ಗುಡ್ಡಗಾಡು ಪ್ರದೇಶ 
ವಿದೇಶ

ಇರಾನ್‌ ನಲ್ಲಿ ಟರ್ಕಿ ವಿಮಾನ ಪತನ, ಸಿಬ್ಬಂದಿ ಸೇರಿ ಎಲ್ಲಾ 11 ಮಂದಿ ಪ್ರಯಾಣಿಕರ ಸಾವು

ಟರ್ಕಿಯ ಖಾಸಗಿ ಪ್ರಯಾಣಿಕ ವಿಮಾನವೊಂದು ಇರಾನ್ ನಲ್ಲಿ ಪತನವಾಗಿದ್ದು, ಸಿಬ್ಬಂದಿಗಳೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 11 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಟೆಹರಾನ್‌: ಟರ್ಕಿಯ ಖಾಸಗಿ ಪ್ರಯಾಣಿಕ ವಿಮಾನವೊಂದು ಇರಾನ್ ನಲ್ಲಿ ಪತನವಾಗಿದ್ದು, ಸಿಬ್ಬಂದಿಗಳೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 11 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಟರ್ಕಿಯ ಬಂಬಾರ್ಡಿಯರ್ ಸಿಎಲ್604 ಎಂಬ ವಿಮಾನ ಇರಾನ್ ನ ಶಹರ್-ಇ ಕಾರ್ಡ್ ಗುಡ್ಡಗಾಡು ಪ್ರದೇಶದಲ್ಲಿ ಪತನವಾಗಿದ್ದು, ಸ್ಥಳೀಯರು ನೀಡಿರುವ ಮಾಹಿತಿ.ಯಂತೆ ವಿಮಾನಕ್ಕೆ ಆಗಸದಲ್ಲೇ ಬೆಂಕಿ ಹೊತ್ತಿಕೊಂಡಿತ್ತು. ಭೂಮಿಗೆ ಅಪ್ಪಳಿಸುತ್ತಲೇ ವಿಮಾನ ಸ್ಫೋಟವಾಯಿತು ಎಂದು ಹೇಳಿದ್ದಾರೆ. ಅಧಿಕಾರಿಗಳು ತಿಳಿಸಿರುವತೆ ಬಂಬಾರ್ಡಿಯರ್ ಸಿಎಲ್604 ವಿಮಾನ ಶಾರ್ಜಾದಿಂದ ಇಸ್ತಾನ್ ಬುಲ್ ಗೆ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ.
ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನಿಂದ ಇಸ್ತಾನ್‌ಬುಲ್‌ಗೆ ತೆರಳುತ್ತಿದ್ದ ವಿಮಾನ ಮಿರೇಟ್ಸ್‌ನ ಶಾರ್ಜಾದಿಂದ ಹೊರಟು 400 ಕಿಮೀ ದೂರದ ದಕ್ಷಿಣ ಟೆಹರಾನ್‌ನ ಶಹರ್-ಇ ಕಾರ್ಡ್ ನಗರದಲ್ಲಿ ಪತನಗೊಂಡಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶವಾಸಿಗಳಿಗೆ ಗುಡ್ ನ್ಯೂಸ್: GST ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಎರಡೇ ತೆರಿಗೆ

207 ಮೀಟರ್ ಎತ್ತರಕ್ಕೆ ಉಕ್ಕಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ

ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ?: ಹಾಸಿಗೆ, ದಿಂಬು ಬೇಡಿಕೆ ತೀರ್ಪು ಸೆ.9ಕ್ಕೆ ಕಾಯ್ದಿರಿಸಿದ ಕೋರ್ಟ್!

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್; Microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!

'DNA ಕಳ್ಳತನ' ಭೀತಿ.. ಚೀನಾದಲ್ಲಿ ಸರ್ವಾಧಿಕಾರಿ Kim Jong-un ಮುಟ್ಟಿದ ಎಲ್ಲ ವಸ್ತುಗಳ ಸ್ವಚ್ಛಗೊಳಿಸಿದ ಸಿಬ್ಬಂದಿ, ಕಾರಣ ಏನು? video

SCROLL FOR NEXT