ಫ್ಲೋರಿಡಾ: ಬ್ರಿಡ್ಜ್ ಸ್ಥಾಪನೆಯಾಗಿ ಕೇವಲ 5 ದಿನಗಳಲ್ಲೇ ಮಿಯಾಮಿ ಫ್ಲೋರಿಡಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ಸಮೀಪದ 950 ಟನ್ ತೂಕದ ಪಾದಚಾರಿ ಸೇತುವೆ ಗುರುವಾರ ಮಧ್ಯಾಹ್ನ ಕುಸಿದುಬಿದ್ದು ನಾಲ್ವರು ಮೃತಪಟ್ಟಿದ್ದಾರೆ.
ನಿರ್ಮಾಣವಾಗ ಕೇವಲ ಐದು ದಿನಗಳಲ್ಲೇ ಫ್ಲೋರಿಡಾ ಇಂಟರ್ ನ್ಯಾಷನಲ್ ಬಳಿಯ 950 ಟನ್ ತೂಕದ ಪಾದಚಾರಿ ಸೇತುವೆ ಕುಸಿದು ಬಿದ್ದು ಸುಮಾರು 6 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ವಿಪತ್ತು ದಳಗಳ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಮೂಲಗಳ ಪ್ರಕಾರ ಸೇತುವೆ ಕೆಳಗೆ ಇನ್ನೂ 8 ವಾಹನಗಳು ಸಿಲುಕಿದ್ದು, ಅವಶೇಷಗಳಡಿ ಸಿಲುಕಿದ್ದ 9 ಜನರನ್ನು ಹೊರತೆಗೆಯಲಾಗಿದೆ. ಗಾಯಗೊಂಡಿರುವ 10 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಬ್ರಿಡ್ಜ್ ಕೆಳಗೆ ಸಿಲುಕಿರುವವರ ರಕ್ಷಣೆಗೆ ತರಬೇತಿ ಪಡೆದ ನಾಯಿ ಮತ್ತು ಮೈಕ್ರೋಫೋನ್ ಬಳಸಿ ಹುಡುಕಾಟ ನಡೆಸುತ್ತಿದ್ದು, ಬ್ರಿಡ್ಜ್‌ನ್ನು ಕೊರೆದು ಹೊರತರಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಡೈರೆಕ್ಟರ್ ಮಿಯಾಮಿ ಡೇಡ್ ತಿಳಿಸಿದ್ದಾರೆ.
ಸದ್ಯಕ್ಕೆ ಬ್ರಿಡ್ಜ್ ಅಡಿ ಸಿಲುಕಿರುವ ಜನರ ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಸ್ಥಳಕ್ಕೆ 100ಕ್ಕೂ ಹೆಚ್ಚು ತಂತ್ರಜ್ಞರು, ಕ್ರೇನ್ ಗಳು, ಬುಲ್ಡೋಜರ್ ಗಳನ್ನು ರವಾನಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸುಮಾರು 950 ಟನ್ ತೂಕದ ಮತ್ತು 174 ಅಡಿಯ ಪಾದಚಾರಿ ಮಾರ್ಗವು ಯೂನಿವರ್ಸಿಟಿ ಕ್ಯಾಂಪಸ್‌ನಿಂದ ಸ್ವೀಟ್‌ವಾಟರ್ ನಗರಕ್ಕೆ ಸಂಪರ್ಕ ಕಲ್ಪಿಸಲಿತ್ತು. ಸದಾ ವಾಹನಗಳಿಂದ ಗಿಜಿಗುಡುವ 8 ಮಾರ್ಗವಿರುವ ಹೆದ್ದಾರಿಯ ಮೇಲೆ ಬ್ರಿಡ್ಜ್‌ನ್ನು ನಿರ್ಮಿಸಲಾಗಿದ್ದು, ಇನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರಲಿಲ್ಲ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics