ಹೆಚ್-1ಬಿ ವೀಸಾ ಅರ್ಜಿ ಪ್ರಕ್ರಿಯೆ ಏಪ್ರಿಲ್ 2 ರಿಂದ ಆರಂಭ; ಪ್ರೀಮಿಯಂ ಪ್ರೋಸೆಸ್ಸಿಂಗ್ ರದ್ದು
ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾದ ಹೆಚ್-1ಬಿ ವೀಸಾಗಳಿಗೆ ಅರ್ಜಿಗಳನ್ನು ಮುಂದಿನ ತಿಂಗಳು ಏಪ್ರಿಲ್ 2 ರಿಂದ ಸ್ವೀಕರಿಸಲಾಗುವುದು ....
ವಾಷಿಂಗ್ಟನ್: ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾದ ಹೆಚ್-1ಬಿ ವೀಸಾಗಳಿಗೆ ಅರ್ಜಿಗಳನ್ನು ಮುಂದಿನ ತಿಂಗಳು ಏಪ್ರಿಲ್ 2 ರಿಂದ ಸ್ವೀಕರಿಸಲಾಗುವುದು ಎಂದು ಅಮೆರಿಕಾದ ಫೆಡರಲ್ ಏಜೆನ್ಸಿ ತಿಳಿಸಿದೆ.
ಅದೇ ರೀತಿ ಎಲ್ಲಾ ಹೆಚ್-1ಬಿ ವೀಸಾ ಅರ್ಜಿಗಳ ಪ್ರೀಮಿಯಂ ಪ್ರೊಸೆಸ್ಸಿಂಗ್ ಗಳನ್ನು ವಾರ್ಷಿಕ ವೀಸಾ ನೀಡಿಕೆಯ ಮಿತಿಯ ಆಧಾರದಲ್ಲಿ ರದ್ದುಪಡಿಸಲಾಗುವುದು ಎಂದು ಅಮೆರಿಕಾ ನಾಗರಿಕ ಮತ್ತು ವಲಸೆ ಸೇವೆ(ಯುಎಸ್ ಸಿಐಎಸ್) ತಿಳಿಸಿದೆ.
ಹೆಚ್-1ಬಿ ವೀಸಾ ವಲಸೆರಹಿತ ವೀಸಾವಾಗಿದ್ದು ಇದರಡಿ ಅಮೆರಿಕಾದ ಕಂಪೆನಿಗಳು ವಿದೇಶಿ ತಾಂತ್ರಿಕ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ನೀಡುವುದಾಗಿದೆ.
ಭಾರತ, ಚೀನಾ ಸೇರಿದಂತೆ ಪ್ರತಿವರ್ಷ ಸಾವಿರಾರು ನೈಪುಣ್ಯಯುತ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ತಂತ್ರಜ್ಞಾನ ಆಧಾರಿತ ಕಂಪೆನಿಗಳು ಹೆಚ್-1ಬಿ ವೀಸಾವನ್ನು ನಂಬಿಕೊಂಡಿವೆ. ಅಮೆರಿಕಾದ ಆರ್ಥಿಕ ವರ್ಷ 2019 ಪ್ರಸಕ್ತ ಸಾಲಿನ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು ಅದಕ್ಕೆ ಮುನ್ನ ಹೆಚ್-1ಬಿ ವೀಸಾ ನೀಡಿಕೆಯ ಪ್ರಕ್ರಿಯೆ ಮುಗಿಯುತ್ತದೆ.
ಎಲ್ಲಾ ಹೆಚ್-1ಬಿ ವೀಸಾಗಳ ವಾರ್ಷಿಕ ಭರ್ತಿಯ ಮಿತಿಯ ಪ್ರೀಮಿಯಂ ಪ್ರಕ್ರಿಯೆಗಳ ರದ್ದತಿಯ ಅವಧಿಯನ್ನು ಸೆಪ್ಚೆಂಬರ್ 10ರವರೆಗೆ ವಿಸ್ತರಿಸುವ ಸಾಧ್ಯತೆಯಿದೆ.
ತಾತ್ಕಾಲಿಕವಾಗಿ ಪ್ರೀಮಿಯಂ ಪ್ರಕ್ರಿಯೆಗಳು ಹೆಚ್1-ಬಿಯ ಒಟ್ಟಾರೆ ಪ್ರಕ್ರಿಯೆ ಅವಧಿಯನ್ನು ಕಡಿಮೆ ಮಾಡಲಿದೆ ಎಂದು ಯುಎಸ್ ಸಿಐಎಸ್ ತಿಳಿಸಿದೆ.
ಹೆಚ್ 1-ಬಿ ವಲಸೆರಹಿತ ವೀಸಾವಾಗಿರುವುದರಿಂದ ಅರ್ಜಿದಾರರು ಮೂರು ವರ್ಷಗಳವರೆಗೆ ಇದರ ದಾಖಲಾತಿ ಪಡೆದುಕೊಳ್ಳಬಹುದು. ಈ ಅವಧಿ ವಿಸ್ತರಣೆಯಾಗಬಹುದು, ಆದರೆ ಒಟ್ಟು ಆರು ವರ್ಷಗಳಿಗಿಂತ ಹೆಚ್ಚು ಇರುವುದಿಲ್ಲ. ಆದರೂ ಕೆಲವೊಂದು ಸಂದರ್ಭಗಳಲ್ಲಿ ವಿನಾಯಿತಿಗಳಿರುತ್ತವೆ.
ಅಮೆರಿಕಾ ಕಾಂಗ್ರೆಸ್ ನ ಕಡ್ಡಾಯದಂತೆ ಪ್ರತಿವರ್ಷ ಹೆಚ್-1ಬಿ ವೀಸಾವನ್ನು 65 ಸಾವಿರದವರೆಗೆ ನೀಡಬಹುದು ಎಂಬ ಮಿತಿಯನ್ನು ಹೇರಲಾಗಿದೆ.ಮೊದಲ 20,000 ವೀಸಾಗಳು ಅಮೆರಿಕಾದ ಸ್ನಾತಕೋತ್ತರ ಡಿಗ್ರಿ ಅಥವಾ ಉನ್ನತ ವ್ಯಾಸಂಗ ಮಾಡುವವರಿಗೆ ನೀಡಿಕೆಯಲ್ಲಿ ಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ.
ಯುಎಸ್ ಸಿಐಎಸ್ ಪ್ರಕಾರ, 2007ರಿಂದ 2017ರವರೆಗೆ ಭಾರತದ ಕುಶಲ ಕೆಲಸಗಾರರು ಅಂದರೆ ತಾಂತ್ರಿಕ ನೈಪುಣ್ಯ ಹೊಂದಿದವರಿಂದ 2.2 ದಶಲಕ್ಷ ಹೆಚ್-1ಬಿ ವೀಸಾ ಕೋರಿ ಅರ್ಜಿ ಬಂದಿವೆ. ಇದೇ ಅವಧಿಯಲ್ಲಿ ಚೀನಾ ದೇಶದ 3,01,000 ಪ್ರಜೆಗಳು ಹೆಚ್-1ಬಿ ವೀಸಾ ಕೋರಿ ಅರ್ಜಿ ಸಲ್ಲಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.