ವಿದೇಶ

ವೀಸಾ ಅರ್ಜಿದಾರರು ಫೋನ್, ಇಮೇಲ್, ಸಾಮಾಜಿಕ ತಾಣದ ಮಾಹಿತಿ ನೀಡಬೇಕು: ಅಮೆರಿಕ

Lingaraj Badiger
ವಾಷಿಂಗ್ಟನ್: ತಪಾಸಣೆ ಪ್ರಕ್ರಿಯೆಯ ಭಾಗವಾಗಿ ಮತ್ತು ದೇಶಕ್ಕೆ ಬೆದರಿಕೆಯನ್ನುಂಟು ಮಾಡುವ ವ್ಯಕ್ತಿಗಳನ್ನು ತಡೆಯುವುದಕ್ಕಾಗಿ ಅಮೆರಿಕ ವೀಸಾ ಅರ್ಜಿದಾರರು ತಮ್ಮ ಫೋನ್, ಇಮೇಲ್ ವಿಳಾಸ ಹಾಗೂ ಸಾಮಾಜಿಕ ತಾಣದ  ವಿವರ ನೀಡಬೇಕು ಎಂದು ಟ್ರಂಪ್ ಸರ್ಕಾರ ಸೂಚಿಸಿದೆ.
ವಲಸೆರಹಿತ ವೀಸಾ ಮೇಲೆ ಅಮೆರಿಕಕ್ಕೆ ಬರುವವರು ಹೊಸ ನಿಯಮಗಳ ಪ್ರಶ್ನೆಗಳ ಪಟ್ಟಿಗೆ ಉತ್ತರ ನೀಡಬೇಕು ಎಂದು ನಿನ್ನೆ ಫೆಡರಲ್ ರಿಜಿಸ್ಟರ್ ಪೊಸ್ಟ್ ಮಾಡಿರುವ ದಾಖಲೆಯಲ್ಲಿ ತಿಳಿಸಲಾಗಿದೆ.
ಅಮೆರಿಕದ ಈ ಹೊಸ ವೀಸಾ ನಿಯಮ ಸುಮಾರು 710,000 ವಲಸೆಗಾರರಿಗೆ ಮತ್ತು 14 ಮಿಲಿಯನ್ ವಲಸೆ ರಹಿತ ವೀಸಾ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ.
ವೀಸಾ ಅರ್ಜಿದಾರರು ತಾವು ನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮದ ವಿವರ ಮತ್ತು ಕಳೆದ ಐದು ವರ್ಷಗಳಲ್ಲಿ ತಾವು ಬಳಸಿದ ಫೋನ್ ಮತ್ತು ಮೊಬೈಲ್ ನಂಬರ್ ಅನ್ನು ನೀಡಬೇಕು ಎಂದು ಟ್ರಂಪ್ ಸರ್ಕಾರ ಸೂಚಿಸಿದೆ.
SCROLL FOR NEXT