ಚೀನಾ: ಫ್ರೆಶ್ ಗಾಳಿಗಾಗಿ ವಿಮಾನದ ತುರ್ತು ಬಾಗಿಲನ್ನೇ ತೆರೆದ ಪ್ರಯಾಣಿಕ
ಪ್ರಯಾಣಿಕನೊಬ್ಬ ವಿಮಾನ ಟೇಕ್ ಆಫ್ ಆಗುವ ಮೊದಲೇ ಫ್ರೆಶ್ ಗಾಳಿಗಾಗಿ ತುರ್ತು ಬಾಗಿಲನ್ನು ತೆಗೆದು...
ಬೀಜಿಂಗ್: ಪ್ರಯಾಣಿಕನೊಬ್ಬ ವಿಮಾನ ಟೇಕ್ ಆಫ್ ಆಗುವ ಮೊದಲೇ ಫ್ರೆಶ್ ಗಾಳಿಗಾಗಿ ತುರ್ತು ಬಾಗಿಲನ್ನು ತೆಗೆದು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಚೀನಾದಲ್ಲಿ ನಡೆದಿದೆ.
ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕನನ್ನು ಚೆನ್(25) ಎಂದು ಗುರುತಿಸಲಾಗಿದ್ದು, ಚೀನಾದ ಸಿಚುವಾನ್ ನೈಋತ್ಯ ಪ್ರಾಂತ್ಯದ ಮಿಯಾನ್ಯಾಂಗ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಚೆನ್ ನನ್ನು ಪೊಲೀಸರು 15 ದಿನಗಳ ಕಾಲ ವಶಕ್ಕೆ ಪಡೆದಿದ್ದು, 11,000 ಡಾಲರ್ ದಂಡವನ್ನು ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಯಾಣಿಕ ಬಾಗಿಲು ತೆರೆದಿದ್ದನ್ನು ಗಮನಿಸಿದ ಅಧಿಕಾರಿವರ್ಗ ಮುಂದೆ ಸಂಭವಿಸಲಿದ್ದ ಭಾರಿ ಅಪಘಾತವನ್ನು ತಡೆದಿದ್ದಾರೆ.
ವಿಮಾನದಲ್ಲಿದ್ದ ಹ್ಯಾಂಡಲ್ ತುರ್ತು ಬಾಗಿಲಿನ ಒಂದು ಭಾಗವಾಗಿತ್ತು ಎಂಬುದು ನನ್ನ ಅರಿವಿಗೆ ಬಂದಿರಲಿಲ್ಲ. ವಿಮಾನದಲ್ಲಿ ಉಸಿರುಗಟ್ಟುವ ಅನುಭವ ಆಗಿದ್ದರಿಂದ ತಾಜಾ ಗಾಳಿಗಾಗಿ ಹ್ಯಾಂಡಲ್ ಎಳೆದೆ. ತಕ್ಷಣ ಬಾಗಿಲು ತೆರೆದಿದ್ದರಿಂದ ನಾನು ಕೂಡ ಗಾಬರಿಗೊಂಡೆ ಎಂದು ಪ್ರಯಾಣಿಕ ಪೊಲೀಸರಿಗೆ ತಿಳಿಸಿದ್ದಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.