ವಿದೇಶ

ಗೋಡಂಬಿ ಅಲರ್ಜಿಯಾದರೆ ಶೌಚಾಲಯದಲ್ಲಿ ಕುಳಿತು ಪ್ರಯಾಣಿಸಿ ಎಂದ ವಿಮಾನ ಸಿಬ್ಬಂದಿ

Raghavendra Adiga
ಲಂಡನ್: ಹುರಿದ ಗೋಡಂಬಿಯ ವಾಸನೆ ನನಗಾಗಲ್ಲ ಎಂದ ಭಾರತೀಯ ಸೋದರರಿಬ್ಬರಿಗೆ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿಮಾನದ ಶೌಚಾಲಯದಲ್ಲಿ ಕುಳಿತು ಪಯಣಿಸಲು ಸೂಚಿಸಿದೆ.
ಶನೆನ್‌ ಸಹೋಟಾ ಮತ್ತು ಸಂದೀಪ್‌ ಸಹೋಟಾ ಎನ್ನುವ ಭಾರತೀಯ ಮೂಲದ ಸೋದರರು ಕಳೆದ ವಾರ ಲಂಡನ್ ನಿಂದ ಸಿಂಗಾಪುರಕ್ಕೆ ಎಮಿರೇಟ್ಸ್‌ ವಿಮಾನದಲ್ಲಿ ತೆರಳುತ್ತಿದ್ದರು. ಅವರಿಗೆ ಹುರಿದ ಗೋಡಂಬಿ ವಾಸನೆ ಅಲರ್ಜಿ ಇತ್ತು. ಆದರೆ ಅದೇ ವಿಮಾನದಲ್ಲಿ ಹುರಿದ ಗೋಡಂಬಿ ಹಾಕಿದ್ದ ಬಿರಿಯಾನಿಯನ್ನು ಪ್ರಯಾಣಿಕರಿಗೆ ನೀಡಲಾಗುತ್ತಿತ್ತು. 
’ನಮಗೆ ಈ ವಾಸನೆ ಅಲಜಿ ಇದೆ, ನಮಗೆ ಇದರಿಂಡ ಪಾರುಮಾಡಿ’ ಎಂದು ಸೋದರರಿಬ್ಬರೂ ವಿಮಾನದಲ್ಲಿನ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಮೂರು ಬಾರಿ ಹೀಗೆ ಮನವಿ ಮಾಡಿದರೂ ಸಿಬಂದಿ ಮಾತ್ರ ಯಾವ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಾಗಿ ಅವರಿಗೆ ವಿಮಾನದ ಶೌಚಾಲಯದಲ್ಲಿ ಕುಳಿತು ಪ್ರಯಾಣಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ .ಸಹೋಟಾ ಸೋದರರು ವಿಮಾನದ ಆಸನಗಳ ಹಿಂಭಾಗದಲ್ಲಿ ಕುಳಿತೇ 7 ಗಂಟೆ ಪ್ರಯಾಣ ಮಾಡಿದ್ದಾರೆ.
ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವಾಗಲೂ, ಪ್ರಯಾಣ ಪ್ರಾರಂಭಿಸುವ ಮುನ್ನವೂ ತಮಗೆ ಗೋಡಂಬಿ ಅಲರ್ಜಿ ಇದೆ ಎನ್ನುವುದನ್ನು ವಿಮಾನಯಾನ ಸಂಸ್ಥೆಗೆ ತಿಳಿಸಿದ್ದೆವು. ಇಷ್ಟಿದ್ದರೂ ಸಹ ಗೋಡಂಬಿ ಬೆರೆಸಿದ ಬಿರಿಯಾನಿಯನ್ನೇ ಪೂರೈಸಲಾಗಿದೆ. ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬ್ಲಾಂಕೆಟ್‌ನಿಂದ ಮೂಗು ಮುಚ್ಚಿಕೊಂಡು ವಿಮಾನದ ಆಸನಗಳ ಹಿಂಭಾಗ ಕುಳಿತು ಪ್ರಯಾಣ ನಡೆಸಬೇಕಾಯಿತು ಎನ್ನುವುದಾಗಿ ಸೋದರರು ತನ್ನ ಅಳಲು ಹೇಳಿಕೊಂಡಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಯಿಸಿರುವ ವಿಮಾನಯಾನ ಸಂಸ್ಥೆ "ಸಹೋಟಾ ಸಹೋದರರ ಬಗ್ಗೆ ನಮಗೆ ಅನುಕಂಪವಿದೆ, ಆದರೆ ಅವರ ಟಿಕೆಟ್ ಬುಕ್ಕಿಂಗ್ ಮಾಹಿತಿಯಲ್ಲಿ ಗೋಡಂಬಿ ಅಲರ್ಜಿಯ ಬಗೆಗೆ ಯಾವ ದಾಖಲೆಗಳಿಲ್ಲ. ಅಲ್ಲದೆ ವಿಮಾನದ ಪ್ರತಿ ಪ್ರಯಾಣಿಕರ ಆದ್ಯತೆಯನ್ನು ಪೂರೈಸುವುದು ನಮ್ಮ ಉದ್ದೇಶವಾಗಿರುತ್ತದೆ. ಈ ಇಬ್ಬರಿಗಾಗಿ ವಿಮಾನದ ಯಾರಿಗೂ ಗೋಡಂಬಿ ಬೆರೆತ ಊಟ ನೀಡಬಾರದೆನ್ನುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದೆ.
SCROLL FOR NEXT