ವಿದೇಶ

ಈ ವರ್ಷ ಮತ್ತೆ 3 ಬಾರಿ ಮೋದಿ-ಚೀನಾ ಅಧ್ಯಕ್ಷರ ಭೇಟಿಯಾಗಲಿದೆ: ಚೀನಾ ರಾಯಭಾರಿ

Srinivas Rao BV
ನವದೆಹಲಿ: ಡೊಕ್ಲಾಮ್ ವಿವಾದದ ನಂತರ ವುಹಾನ್ ನಲ್ಲಿ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸೀ-ಜಿನ್ ಪಿಂಗ್ ನಡೆಸಿದ ಮಹತ್ವದ ಮಾತುಕತೆ ಫಲಪ್ರದವಾದ ಬೆನ್ನಲ್ಲೇ ಈ ವರ್ಷ ಮತ್ತೆ ಮೂರು ಬಾರಿ ಪ್ರಧಾನಿ ಮೋದಿ-ಕ್ಸೀ ಜಿನ್ಪಿಂಗ್ ಭೇಟಿ ಮಾಡಲಿದ್ದಾರೆ ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಹೇಳಿದ್ದಾರೆ. 
ಕಳೆದ ಭೇಟಿಯಲ್ಲಿ ಇಬ್ಬರೂ ನಾಯಕರು ಜಾಗತಿಕ ಹಾಗೂ ದ್ವಿಪಕ್ಷೀಯ ವಿಷಯಗಳಿಗೆ ಸಂಬಂಧಿಸಿದಂತೆ ದೀರ್ಘಾವಧಿಯ ಕಾರ್ಯತಂತ್ರ ರೂಪಿಸಲು ಒಮ್ಮತಕ್ಕೆ ಬಂದಿದ್ದರು. ಬೀಜಿಂಗ್ ನಿಂದ ಹೊರಭಾಗದಲ್ಲಿ ಚೀನಾ ಅಧ್ಯಕ್ಷರು ದ್ವಿಪಕ್ಷೀಯ ಮಾತುಕತೆ ನಡೆಸಿದ ಉದಾಹರಣೆಗಳಿಲ್ಲ. ಆದರೆ ಈ ಬಾರಿಯ ಪ್ರಧಾನಿ ಮೋದಿ-ಕ್ಸೀ ಜಿನ್ಪಿಂಗ್ ಭೇಟಿ ಈ ಕಾರಣದಿಂದಲೂ ವಿಶೇಷವಾಗಿತ್ತು, ಈ ಘಟನೆ ಚೀನಾ ಭಾರತಕ್ಕೆ ಹೆಚ್ಚು ಮಹತ್ವ ನೀಡುತ್ತದೆ ಎಂಬುದನ್ನು ತೋರಿಸುತ್ತದೆ. 2018 ರಲ್ಲೇ ಮೋದಿ-ಕ್ಸೀ ಜಿನ್ಪಿಂಗ್ ಅವರ ಇನ್ನೂ 3 ಬಾರಿ ಮಾರುಕತೆ ನಡೆಸಲಿದ್ದಾರೆ ಎಂದು ಚೀನಾ ರಾಯಭಾರಿ ಅಧಿಕಾರಿ ತಿಳಿಸಿದ್ದಾರೆ. 
SCROLL FOR NEXT