ಸಂಗ್ರಹ ಚಿತ್ರ 
ವಿದೇಶ

ಜೀವದ ಹಂಗನ್ನು ತೊರೆದು ಕ್ಷಣ ಮಾತ್ರದಲ್ಲಿ 4 ಮಹಡಿ ಏರಿ ಮಗುವನ್ನು ರಕ್ಷಿಸಿದ ಯುವಕ!

ಯುವಕನೋರ್ವ ತನ್ನ ಜೀವದ ಹಂಗನ್ನು ತೊರೆದು ಕ್ಷಣ ಮಾತ್ರದಲ್ಲಿ ನಾಲ್ಕು ಮಹಡಿ ಹತ್ತಿ ಕೆಳಗೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿ ಸಾಹಸ ಮೇರೆದ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ...

ಪ್ಯಾರಿಸ್: ಯುವಕನೋರ್ವ ತನ್ನ ಜೀವದ ಹಂಗನ್ನು ತೊರೆದು ಕ್ಷಣ ಮಾತ್ರದಲ್ಲಿ ನಾಲ್ಕು ಮಹಡಿ ಏರಿ ಕೆಳಗೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿ ಸಾಹಸ ಮೇರೆದ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ. 
ಅಪಾರ್ಟ್ ಮೆಂಟ್ ಕಟ್ಟಡವೊಂದರ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಅಪಾಯಕಾರಿಯಾಗಿ ನೇತಾಡುತ್ತಿದ್ದ ನಾಲ್ಕು ವರ್ಷದ ಮಗುವೊಂದು ಯುವಕನೊಬ್ಬ ಕಟ್ಟಡದ ಹೊರಭಾಗದಿಂದ ಸ್ಪೈಡರ್ ಮ್ಯಾನ್ ನಂತೆ ಏರಿ ಮಗುವನ್ನು ರಕ್ಷಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಸಾಹಸಿ ಯುವಕ ಬರಿಗೈಯಲ್ಲಿ ಒಂದು ಬಾಲ್ಕನಿಯಿಂದ ಇನ್ನೊಂದು ಬಾಲ್ಕನಿಗೆ ಜಿಗಿದು ನಾಲ್ಕನೇ ಮಹಡಿಗೆ ಹತ್ತುವ ಮೂಲಕ ಮಗುವನ್ನು ರಕ್ಷಿಸಿದ್ದು ಆ ಯುವಕನ ಚಾಕಚಕ್ಯತೆ ಮತ್ತು ಸಮಯಪ್ರಜ್ಞೆಯನ್ನು ಟ್ವೀಟರಿಗರು ಪ್ರಶಂಸಿಸಿದ್ದಾರೆ. 
ಯುವಕನನ್ನು ಮಮೌದೌ ಗಸ್ಸಮ್ ಎಂದು ಹೇಳಲಾಗಿದ್ದು ಆತನಿಗೆ ಪ್ಯಾರಿಸ್ ಮೇಯರ್ ಆನ್ನೆ ಹಿಡಾಲ್ಗೊ ಪ್ರಶಂಸಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್