ಪಟ್ರಿಸಿಯಾ ಒರ್ಗಾನೋ 
ವಿದೇಶ

ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಎದೆ ಹಾಲುಣಿಸಿ ಮಾತೃ ವಾತ್ಸಲ್ಯ ಮೆರೆದ ಗಗನಸಖಿ

ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಎದೆ ಹಾಲುಣಿಸುವ ಮೂಲಕ ಗಗನಸಖಿಯೊಬ್ಬರು ಮಾತೃ ವಾತ್ಸಲ್ಯ ಮೆರೆದಿದ್ದಾರೆ...

ಮನಿಲಾ: ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಎದೆ ಹಾಲುಣಿಸುವ ಮೂಲಕ ಗಗನಸಖಿಯೊಬ್ಬರು ಮಾತೃ ವಾತ್ಸಲ್ಯ ಮೆರೆದಿದ್ದಾರೆ. 
ಫಿಲಿಪೈನ್ಸ್ ಏರ್ ಲೈನ್ ಗೆ ಸೇರಿದ ವಿಮಾನವೊಂದು ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಪುಟ್ಟ ಮಗುವಿನ ಜತೆಗೆ ತಾಯಿಯೊಬ್ಬರು ಫಿಲಿಪೈನ್ಸ್ ವಿಮಾನವೇರಿದ್ದರು. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಮಗು ಹಸಿವಿನಿಂದ ಅಳತೊಡಗಿದೆ. ತಾಯಿ ಎಷ್ಟೇ ಸಮಾಧಾನ ಮಾಡಿದರು ಮಗು ಅಳು ನಿಲ್ಲಿಸಲಿಲ್ಲ. ಇದನ್ನು ಗಮನಿಸಿ 24 ವರ್ಷದ ಗಗನಸಖಿ ಪಟ್ರಿಸಿಯಾ ಒರ್ಗಾನೋ ತಾಯಿ ಹೃದಯದ ಅವರ ಕರುಳು ಚುರುಕ್ ಎಂದಿದೆ. ಮಗುವಿನ ತಾಯಿಯನ್ನು ಕೇಳಿದಾಗ ಆಕೆ ಬಾಟಲಿ ಹಾಲು ಖಾಲಿಯಾಗಿರುವುದಾಗಿ ಹೇಳಿದ್ದಾರೆ. ವಿಮಾನದಲ್ಲಿ ಫಾರ್ಮುಲಾ ಹಾಲು ಸಹ ಇರಲಿಲ್ಲವಾಗಿತ್ತು. 
ಈ ವೇಳೆ ಪಟ್ರಿಸಿಯಾ ಮಗುವಿನ ತಾಯಿಗೆ ತಾನು ಎದೆ ಹಾಲು ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಆ ತಾಯಿ ಒಪ್ಪಿಕೊಂಡಿದ್ದು ತಕ್ಷಣ ಮಗುವನ್ನು ಎತ್ತಿಕೊಂಡು ಎದೆ ಹಾಲನ್ನು ಮಗುವಿಗೆ ನೀಡಿದ್ದಾರೆ. ಹಾಲು ಕುಡಿಯುತ್ತಲೆ ಮಗು ನಿದ್ರೆಗೆ ಜಾರಿದ್ದು ನಂತರ ತಾಯಿಯ ಮಡಿಲಿಗೆ ಮಗುವನ್ನು ಒಪ್ಪಿಸಿದ್ದಾರೆ. 
ಹಸಿವಿನಿಂದ ಬಳಲುತ್ತಿದ್ದ ಮಗುವಿಗೆ ಹಾಲುಣಿಸಿದ್ದಕ್ಕೆ ತನ್ನ ಹೃದಯಾಕ್ಕಾದ ಆನಂದವನ್ನು ಒರ್ಗಾನೋ ಫೇಸ್ ಬುಕ್ ನಲ್ಲಿ ಚಿತ್ರ ಸಮೇತ ಹಂಚಿಕೊಂಡಿದ್ದು ಈ ಪೋಸ್ಟ್ 35 ಸಾವಿರ ಶೇರ್ ಮತ್ತು 1,71,000 ಪ್ರತಿಕ್ರಿಯೆಗಳು ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಕಾಶ್ಮೀರಿ ಪಂಡಿತರ ನರಮೇಧ: 28 ವರ್ಷಗಳ ಬಳಿಕ Wandhama ಕೇಸ್ ಫೈಲ್ ರೀ-ಓಪನ್, ತನಿಖೆ ಪುನರಾರಂಭ..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!