ಅಮೆರಿಕಾ ಚುನಾವಣೆಯಲ್ಲಿ ಅರಳುತ್ತಾ ಕಮಲ? 
ವಿದೇಶ

ಅಮೆರಿಕಾ ಚುನಾವಣೆಯಲ್ಲಿ ಅರಳುತ್ತಾ ಕಮಲ?

ಅಮೆರಿಕಾದಲ್ಲಿ 2020 ಕ್ಕೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳ ಕುರಿತು ಈಗಾಗಲೇ ಚರ್ಚೆ ಪ್ರಾರಂಭವಾಗಿದೆ....

ಅಮೆರಿಕಾದಲ್ಲಿ 2020 ಕ್ಕೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳ ಕುರಿತು ಈಗಾಗಲೇ ಚರ್ಚೆ ಪ್ರಾರಂಭವಾಗಿದೆ. ಈ ಬಾರಿಯ ಅಧ್ಯಕ್ಷೀಯ ಹುದ್ದೆಯ ರೇಸ್ ನಲ್ಲಿ ಮಹಿಳೆಯರ ಹೆಸರು ಹೆಚ್ಚಿನ ಸಂಖ್ಯೆಯಲ್ಲಿರುವುದರ ಜೊತೆಗೆ ಹಿಂದೂ-ಭಾರತೀಯ ಮೂಲದ ಹೆಸರುಗಳು ಕೇಳಿಬರುತ್ತಿರುವುದು ವಿಶೇಷ. 
 ಫೀಮೇಲ್ ಒಬಾಮ ಎಂದೇ ಖ್ಯಾತರಾಗಿರುವ ಅಮೆರಿಕ ಭಾರತೀಯ ಮೂಲದ ಅಮೆರಿಕ ಸೆನೆಟರ್ ಕಮಲಾ ಹ್ಯಾರಿಸ್ ಅವರ ಹೆಸರೂ ಸಹ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬಂದಿದ್ದು, ಡೆಮಾಕ್ರೆಟಿಕ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಕ್ಕೆ ತಯಾರಿ ನಡೆಸಿಕೊಳ್ಳುತ್ತಿದ್ದಾರೆ ಎಂದು  ವಿಶ್ಲೇಷಿಸಲಾಗುತ್ತಿದೆ. 
ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಭಾರತೀಯ ಮೂಲದವರು, 1960 ರಲ್ಲಿ ಚೆನ್ನೈ ನಿಂದ ಅಮೆರಿಕಾಗೆ ತೆರಳಿ ಅಮೆರಿಕ ವ್ಯಕ್ತಿಯನ್ನೇ ವಿವಾಹವಾಗಿದ್ದರು.  ಕಮಲಾ ಹ್ಯಾರಿಸ್ ಅವರ ತಂದೆ ಡೊನಾಲ್ಡ್ ಹ್ಯಾರಿಸ್ ಅಮೆರಿಕದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದ ವಿದ್ವಾಂಸರಾಗಿದ್ದರು. 
ಒಬಾಮಾ ಮಾದರಿಯಲ್ಲೇ  ಕಮಲಾ ಹ್ಯಾರಿಸ್ ಸಹ ಜನಪ್ರಿಯತೆ ಹೊಂದಿದ್ದು   ಫೀಮೇಲ್ ಒಬಾಮ ಎಂದೇ ಖ್ಯಾತರಾಗಿರುವ ಅಮೆರಿಕ ಭಾರತೀಯ ಮೂಲದ ಅಮೆರಿಕ ಸೆನೆಟರ್ 2020 ರ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ ಎನ್ನುತ್ತಿವೆ ಅಮೆರಿಕ ಪತ್ರಿಕೆಗಳು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!