ವಿದೇಶ

ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ: ಸ್ಪರ್ಧೆಯಲ್ಲಿ ಜಯಂತ್ ಕಾಯ್ಕಿಣಿ ಸೇರಿ ನಾಲ್ವರು ಭಾರತೀಯರು!

Raghavendra Adiga
ಲಂಡನ್: ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿನ ೨೫ ಸಾವಿರ ಅಮೆರಿಕನ್ ಡಾಲರ್ ಮೊತ್ತದ ಪ್ರಶಸ್ತಿ ಡಿಎಸ್ ಸಿ ಬಹುಮಾನಕ್ಕಾಗಿ ಸ್ಪರ್ಧಿಗಳ ಹೆಸರನ್ನು ಬಿಡುಗಡೆಗೊಳಿಸಿದ್ದು ಕನ್ನಡದ ಪ್ರಸಿದ್ದ ಸಾಹಿತಿ ಜಯಂತ ಕಾಯ್ಕಿಣಿ ಸೇರಿ ನಾಲ್ವರು ಭಾರತೀಯರ ಹೆಸರು ಪ್ರಕಟವಾಗಿದೆ.
ಜಯಂತ ಕಾಯ್ಕಿಣಿ, ನೀಲ್ ಮುಖರ್ಜಿ, ಸುಜೀತ್ ಸರಾಫ್ ಹಾಗೂ ಮನು ಜೋಸೆಫ್ ಸ್ಪರ್ಧೆಯಲ್ಲಿರುವ ಭಾರತೀಯರಾಗಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್ ನಲ್ಲಿ ನವೆಂಬರ್ 15ರಂದು ಡಿಎಸ್ಸಿ ಪ್ರಶಸ್ತಿ 2018 ಶಾರ್ಟ್ ಲಿಸ್ಟ್ ಅನ್ನು ಘೋಷಿಸಲಾಗಿದೆ.
ತೇಜಸ್ವಿನಿ ನಿರಂಜನ ಇಂಗ್ಲಿಷ್ ಗೆ ಅನುವಾದಿಸಿರುವ ಜಯಂತ ಕಾಯ್ಕಿಣಿ ಅವರ "ನೋ ಪ್ರೆಸೆಂಟ್ಸ್ ಪ್ಲೀಸ್" ಕೃತಿಯು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿದೆ.
ಸ್ಪರ್ಧೆಯಲ್ಲಿರುವ ಕೃತಿಗಳು ಜಾಗತಿಕ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂಘಟಕರು ಹೇಳಿದ್ದು 2019 ರ ಜನವರಿ 22 ಮತ್ತು ಜನವರಿ 27 ರ ನಡುವೆ ಕೋಲ್ಕತ್ತಾದಲ್ಲಿ ನಡೆಯಲಿರುವ ಟಾಟಾ ಸ್ಟೀಲ್ ಕೋಲ್ಕತಾ ಸಾಹಿತ್ಯ ಸಮಾವೇಶದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಘೋಷಿಸಲಾಗುತ್ತದೆ.
ಕಳೆದ ಏಳು ವರ್ಷಗಳಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು ಇದು ಪ್ರಶಸ್ತಿಯ ಎಂತನೇ ವರ್ಷವಾಗಿದೆ.ದಕ್ಷಿಣ ಏಷ್ಯಾದ ಸಾಹಿತ್ಯ ಪ್ರಕಾರಕ್ಕಾಗಿಯೇ ವಿಶೇಷವಾಗಿ ಸ್ಥಾಪಿತವಾಗಿರುವ ಈ ಪ್ರಶಸ್ತಿಯು ಅತ್ಯಂತ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾಗಿದೆ.
SCROLL FOR NEXT