ಸಾಕಪ್ಪ ಸಾಕು ಹೆಂಡತಿ ಸಹವಾಸ ಅಂತ ಮನೆಯಿಂದ ಪಬ್ಗೆ ಸುರಂಗ ತೋಡಿದ ಪತಿರಾಯ!
ಹೆಂಡತಿಯ ಪ್ರತಿನಿತ್ಯದ ಆ ಟಾರ್ಚರ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪತಿಯಾರನೊಬ್ಬ ನೇರವಾಗಿ ಪಬ್ಗೆ ಸುರಂಗ ತೋಡಿರುವ ಘಟನೆ ವರದಿಯಾಗಿದೆ...
ಐರ್ಲೆಂಡ್: ಹೆಂಡತಿಯ ಪ್ರತಿನಿತ್ಯದ ಆ ಟಾರ್ಚರ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪತಿಯಾರನೊಬ್ಬ ನೇರವಾಗಿ ಪಬ್ಗೆ ಸುರಂಗ ತೋಡಿರುವ ಘಟನೆ ವರದಿಯಾಗಿದೆ.
ದಿನಂಪ್ರತಿ ರಾತ್ರಿ ಮಲಗಿದಾಗ ಹೆಂಡತಿಯ ಗೊರಕೆ ಶಬ್ಧದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪತಿಯೊಬ್ಬ ಸುಮಾರು 800 ಮೀಟರ್ ಸುರಂಗವನ್ನು ಕೊರೆದಿದ್ದಾನೆ. ಇದಕ್ಕೆ ಆತ ತೆಗೆದುಕೊಂಡಿದ್ದು ಬರೋಬ್ಬರಿ 15 ವರ್ಷಗಳ ಕಾಲ. ಇನ್ನು ದಿ ಶಾವಂಶ್ವಾಂಕ್ ರಿಡೆಂಪ್ಶನ್ ಚಿತ್ರದಿಂದ ಸ್ಫೂರ್ತಿ ಪಡೆದು ಈ ಕೆಲಸ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಹೆಂಡತಿಯ ಗೊರಕೆ ಶಬ್ಧ ಕಿವಿಗೆ ರಾಚುತ್ತಿದ್ದರಿಂದ ಬೇಸತ್ತ ಪ್ಯಾಟ್ಸಿ ಪಕ್ಕದ ಕೋಣೆಯಲ್ಲಿ ಮಲಗಲು ಶುರು ಮಾಡಿದ್ದಾನೆ. ಅಲ್ಲಿಯೂ ಆಕೆಯ ಗೊರಕೆ ಶಬ್ಧ ಕೇಳಿಸುತ್ತಿದ್ದರಿಂದ ಕೊನೆಗೆ ವಿಧಿ ಇಲ್ಲದೆ ತನ್ನ ಮನೆಯ ಪಕ್ಕದಲ್ಲೇ ಇದ್ದ ಪಬ್ ಗೆ ಸುರಂಗ ಕೊರೆದಿದ್ದಾನೆ.
ಅಲ್ಲದೆ ಕಳೆದ 5 ವರ್ಷಗಳಿಂದ ಪ್ಯಾಟ್ಸಿ ಪ್ರತಿ ರಾತ್ರಿ 11 ಗಂಟೆ ಸುಮಾರಿಗೆ ಸುರಂಗ ಮಾರ್ಗದಲ್ಲಿ ಪಬ್ಗೆ ಹೋಗಿ ಮಧ್ಯರಾತ್ರಿ ಮನೆಗೆ ಹಿಂತಿರುಗುತ್ತಿದ್ದ. ಗಾಢ ನಿದ್ರೆಯಲ್ಲಿದ್ದ ಹೆಂಡತಿಗೆ ಇದು ಗೊತ್ತೆ ಆಗುತ್ತಿರಲಿಲ್ಲ ಎಂದು ಪ್ಯಾಟ್ಸಿ ಹೇಳಿದ್ದಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.