ವಾಷ್ಟಿಂಗನ್: ಸೆಕ್ಸ್ ಮಾಡಲು ಸಾಧ್ಯವಾಗದಿದ್ದರೂ ಮಹಿಳೆಯನ್ನು ಕಾಮಿಸುವ ವಿಕೃತ ಕಾಮಿಯೊಬ್ಬ ಬರೋಬ್ಬರಿ 90 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ತಾನಾಗೇ ಪೊಲೀಸರಿಗೆ ಶರಣಾಗಿದಿದ್ದರೆ ಇತನ ಕೃತ್ಯಗಳು ಬಯಲಿಗೆ ಬರುತ್ತಿರಲಿಲ್ಲವೇನೋ.
ಹೌದು, ಅಮೆರಿಕ ಮೂಲದ 78 ವರ್ಷದ ಸ್ಯಾಮುಯೆಲ್ ಲಿಟಲ್ ಅಮೆರಿಕದ 14 ರಾಜ್ಯಗಳಲ್ಲಿ ಬರೋಬ್ಬರಿ 90 ಮಹಿಳೆಯರನ್ನು ರೇಪ್ ಮಾಡಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಕರಣದಲ್ಲೂ ಸಿಕ್ಕಿಬಿದ್ದಿರಲಿಲ್ಲ. ಈಗ ಇಳಿವಯಸ್ಸಿನಲ್ಲಿ ತಮ್ಮ ದುಷ್ಕೃತ್ಯಗಳು ಜಗತ್ತಿಗೆ ಗೊತ್ತಾಗಲಿ ಎಂಬ ಕಾರಣದಿಂದ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ.
ಸ್ಯಾಮುಯೆಲ್ ತಾನು 40 ವರ್ಷದ ಹಿಂದೆ ನಡೆಸಿದ್ದ ಕೊಲೆಗಳ ಬಗ್ಗೆ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಪೊಲೀಸರಿಗೆ ತಿಳಿಸಿದ್ದು ಈತನ ದುಷ್ಕೃತ್ಯಗಳನ್ನು ಕೇಳಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇನ್ನು ಸ್ಯಾಮುಯೆಲ್ ನನ್ನು ರೇಪಿಸ್ಟ್ ಎಂದು ಕರೆದರೆ ಕೋಪಗೊಳ್ಳುವ ಈತ. ತನಗೆ ಲೈಂಗಿಕ ಕ್ರಿಯೆಗೆ ಶಕ್ತನಾಗಿಲ್ಲ. ಹೀಗಾಗಿ ನಾನು ಹೇಗೆ ರೇಪ್ ಮಾಡಲಿ ಎಂದು ಪ್ರಶ್ನಿಸುತ್ತಾನೆ.
ಸ್ಯಾಮುಯೆಲ್ ಗೆ ನಿಮಿರುವಿಕೆ ದೌರ್ಬಲ್ಯವಿದ್ದು, ಈತ ಮಹಿಳೆಯನ್ನು ಅತ್ಯಾಚಾರ ಕ್ರಮವೇ ಬೇರೆ. ಮೂಲತಃ ಬಾಕ್ಸರ್ ಆಗಿದ್ದ ಈತ ಸದೃಢ ಮೈಕಟ್ಟು. ಮಹಿಳೆಯ ಮುಖಕ್ಕೆ ಗುದ್ದಿ ಅವರು ನಿತ್ರಾಣಗೊಳ್ಳುವಂತೆ ಮಾಡುತ್ತಿದ್ದ. ನಂತರ ಅವರನ್ನು ಬೆತ್ತಲೆಗೊಳಿಸಿ ಕುತ್ತಿಗೆ ಹಿಸುಕಿ ವಿಲವಿಲ ಒದ್ದಾಡುವಂತೆ ಮಾಡಿ ಅದರಲ್ಲೇ ಲೈಂಗಿಕ ವಿಕೃತ ಆನಂದ ಪಡೆಯುತ್ತಿದ್ದ. ನಂತರ ಅದೇ ಉದ್ರೇಕದಲ್ಲಿ ಹಸ್ತಮೈಥುನ ಮಾಡಿಕೊಂಡು ಮಹಿಳೆಯ ಮೇಲೆ ವೀರ್ಯ ಚೆಲ್ಲುತ್ತಿದ್ದ ಎಂದು ಹೇಳಿಕೊಂಡಿದ್ದಾನೆ.