ಧಾಯ್ ಲ್ಯಾಂಡ್ ನಲ್ಲಿ ಗುಂಡಿನ ದಾಳಿ:, ಓರ್ವ ಭಾರತೀಯ ಪ್ರವಾಸಿ ಸೇರಿ ಇಬ್ಬರು ಸಾವು, ಐವರಿಗೆ ಗಾಯ
ಬ್ಯಾಂಕಾಂಕ್: ಎರಡು ವಿರೋಧಿ ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಾರತೀಯ ಪ್ರವಾಸಿ ಸಾವನ್ನಪ್ಪಿದ್ದು ಐವರು ಗಂಬೀರವಾಗಿ ಗಾಯಗೊಂಡಿರುವ ಘಟನೆ ಥಾಯ್ ಲ್ಯಾಂಡಿನ ರಾಜಧಾನಿ ಬ್ಯಾಂಕಾಕ್ ನಲ್ಲಿ ಸಂಬವಿಸಿದೆ.
ಸೆಂಟೆರಾ ವಾಟರ್ ಗೇಟ್ ಪೆವಿಲಿಯನ್ ಹೋಟೆಲ್ ಹಿಂಬಾಗದ ರಸ್ತೆಯಲ್ಲಿ ಕಳೆದ ರಾತ್ರಿ ಈ ಶೂಟೌಟ್ ಸಂಭವಿಸಿದೆ ಎಂದು ಥಾಯ್ ಪೋಲೀಸರು ಮಾಹಿತಿ ನೀಡಿದ್ದಾರೆ. ಟೂರಿಸ್ಟ್ ಕೋಚ್ ಗಳನ್ನು ಪಾರ್ಕ್ ಮಾಡಿರುವ ಸ್ಥಳದಲ್ಲಿಯೇ ಈ ದುರ್ಘಟನೆ ನಡೆದಿದೆ ಎಂದು 'ಬ್ಯಾಂಕಾಕ್ ಪೋಸ್ಟ್' ವರದಿ ಮಾಡಿದೆ.
ಗಖ್ರೇಜರ್ ಧೀರಜ್ ಎನ್ನುವ ಓರ್ವ ಭಾರತೀಯ ಪ್ರವಾಸಿ ಕೆವೊವೋಂಗ್ಸಾ ತೋ ನೇಕ್ಯೋ ಎಂಬ 28ರ ಹರೆಯದ ಲಾವೋ ಪ್ರವಾಸಿಗ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಗಾಯಾಳುಗಳಲ್ಲಿ ಇಬ್ಬರು ಭಾರತೀಯರು, ಇಬ್ಬರು ಥಾಯ್ ನಾಗರಿಕರು ಹಾಗೂ ಓರ್ವ ಲಾವೋ ನಾಗರಿಕರಿದಾರೆ. ಅವರನ್ನು ಆಸ್ಪತ್ರೆಗೆ ದಾಕಲಿಸಿ ಅಗತ್ಯ ಚಿಕಿತ್ಸೆ ನಿಡಲಾಗುತ್ತಿದೆ.
ಭಾರತೀಯ ಪ್ರವಾಸಿಗರು ಗುಂಪು ಪ್ರವಾಸದಲ್ಲಿ ಪಾಲ್ಗೊಂಡು ರಾತ್ರಿ ಊಟದ ಬಳಿಕ ಬಸ್ ಗಾಗಿ ಪಾರ್ಕಿಂಗ್ ಜಾಗದಲ್ಲಿ ಕಾದು ನಿಂತಿದ್ದರು. ಅಲ್ಲಿ ಸಮೀಪದಲ್ಲಿದ್ದ ಸ್ನೂಕರ್ ಕ್ಲಬ್ ನಿಂದ ಆಗಮಿಸಿದ ಎರಡು ಯುವಕರ ಗುಂಪು ಪಾರಿಂಗ್ ಜಾಗದ ಕುರಿತ ಜಗಳ ಪ್ರಾರಂಭಿಸ್ದಾಗ ಮುಂದೆ ಅದು ಬೆಳೆದು ಶೂಟೌಟ್ ಗೆ ತಿರುಗಿತು ಎಂದು ಪೊಲೀಸರು ಮೇಜರ್ ಜನರಲ್ ಹೇಳಿದ್ದಾರೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಮಾರು 20 ಮಂದಿ ಪಿಸ್ತೂಲ್, ಚಾಕುಗಳು ಸೇರಿದಂತೆ ಇನ್ನೂ ಅನೇಕ ಮಾರಕಾಸ್ತ್ರಗಳೊಂದಿಗೆ ಬಡಿದಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೋಲೀಸರು ಆಗಮಿಸುತ್ತಲೇ ಎರಡೂ ಗುಂಪಿನ ಸದಸ್ಯರು ಪರಾರಿಯಾಗಿದ್ದಾರೆ. ಇದುವರೆಗೆ ಯಾರೊಬ್ಬರ ಬಂಧನವಾಗಿಲ್ಲ, ದುಷ್ಕರ್ಮಿಗಳು ಬಳಸಿದ ಮಾರಕಾಸ್ತ್ರಗಳು, ಬಂದೂಕಿನ ಗುರುತು ಸಹ ಪತ್ತೆಯಾಗಿಲ್ಲ ಎಂದು ಪೋಲೀಸರು ಮಾಹಿತಿ ಒದಗಿಸಿದ್ದಾರೆ.