ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಲ್ಲಿನ ಲಿಬರಲ್ ಗಳು ಅನೇಕ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ಈಗ ನ್ಯೂಯಾರ್ಕ್ ನಲ್ಲಿ ಟ್ರಂಪ್ ವಿರುದ್ಧ ಅಸಮಾಧಾನ ಹೊರಹಾಕುವುದಕ್ಕೆ ವಿನೂತನ ರೀತಿಯ ಪ್ರತಿಭಟನೆ ಪ್ರಾರಂಭವಾಗಿದೆ.
ಜಾಹಿರಾತು ವೃತ್ತಿಪರರಾಗಿರುವ ಫಿಲ್ ಗೇಬಲ್, ನ್ಯೂಯಾರ್ಕ್ ನ ಬ್ರೂಕ್ಲಿನ್ ಸೈಡ್ ವಾಕ್ಸ್ ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರತಿಮೆ (1980 ರಲ್ಲಿ ಡೊನಾಲ್ಡ್ ಟ್ರಂಪ್ ಇದ್ದ ರೀತಿಯಲ್ಲಿ ನಿರ್ಮಿಸಲಾಗಿದೆ)ಯನ್ನು ಇಟ್ಟಿದ್ದು, ಆ ಪ್ರತಿಮೆ "ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ" ಎನ್ನುವ ಸಂದೇಶ ಹೊಂದಿದೆ.
ನಾವು ಅಸಹ್ಯಪಟ್ಟುಕೊಳ್ಳುವುದನ್ನು ಈ ಮೂಲಕ ತಿಳಿಸಬಹುದು ಎಂಬುದು ಡೊನಾಲ್ಡ್ ಟ್ರಂಪ್ ಪ್ರತಿಮೆಗಳನ್ನು ಇಟ್ಟಿರುವುದರ ಹಿಂದಿನ ಉದ್ದೇಶವಾಗಿದೆ ಎಂದು ಫಿಲ್ ಗೇಬಲ್ ಹೇಳಿದ್ದಾರೆ. ಪ್ರತಿಮೆಗಳನ್ನು ಇಟ್ಟ ನಂತರ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಬೇಕಿತ್ತು. ಈ ವರೆಗೂ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ ಎನ್ನುತ್ತಾರೆ ಗೇಬಲ್
ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಗೇಬಲ್ ಹೇಳಿದರೂ ಸಹ ಬಹುತೇಕ ಜನರು ಇದನ್ನು ಹಾಸ್ಯದ ವಿಷಯವನ್ನಾಗಿ ಪರಿಗಣಿಸಿದ್ದಾರೆ. ಇದೇ ವೇಳೇ ಟ್ರಂಪ್ ನ ಕೆಲವು ಅಭಿಮಾನಿಗಳು ಇದನ್ನು ಅಧ್ಯಕ್ಷರಿಗೆ ಮಾಡಿರುವ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics