ಲುಲು ಜೆಮಿಯಾ 
ವಿದೇಶ

ಜಗತ್ತಿನಲ್ಲೇ ಇದು ವಿಚಿತ್ರ ಮದುವೆ: ಪೋಷಕರ ಒತ್ತಡಕ್ಕೆ ಮಣಿದು ಗಂಡು ಬೇಡ ಅಂತ ತನ್ನನ್ನು ತಾನೇ ಮದುವೆ ಮಾಡಿಕೊಂಡ ವಧು!

ಮದುವೆಯಾಗಲು ಇಲ್ಲವಿಲ್ಲದಿದ್ದರೂ ಮದುವೆಯಾಗುವಂತೆ ಪೋಷಕರು ಪೀಡಿಸುತ್ತಿದ್ದರಿಂದ ಅವರ ಒತ್ತಡಕ್ಕೆ ಮಣಿದು ಆಕ್ಸ್ ಫರ್ಡ್ ವಿದ್ಯಾರ್ಥಿನಿಯೊಬ್ಬಳು ಗಂಡು...

ಉಗಾಂಡ: ಮದುವೆಯಾಗಲು ಇಲ್ಲವಿಲ್ಲದಿದ್ದರೂ ಮದುವೆಯಾಗುವಂತೆ ಪೋಷಕರು ಪೀಡಿಸುತ್ತಿದ್ದರಿಂದ ಅವರ ಒತ್ತಡಕ್ಕೆ ಮಣಿದು ಆಕ್ಸ್ ಫರ್ಡ್ ವಿದ್ಯಾರ್ಥಿನಿಯೊಬ್ಬಳು ಗಂಡು ಬೇಡ ಅಂತ ತನ್ನನ್ನು ತಾನೇ ಮದುವೆ ಮಾಡಿಕೊಂಡಿರುವ ವಿಚಿತ್ರ ಮದುವೆ ಉಗಾಂಡದಲ್ಲಿ ನಡೆದಿದೆ. 
ಆಗಸ್ಟ್ 27ರಂದು ಉಗಾಂಡದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯದಲ್ಲಿ 32 ವರ್ಷದ ಲುಲು ಜೆಮಿಯಾ ತನ್ನನ್ನೇ ನಾನು ವರಿಸಿಕೊಂಡ ವಧು. ಲುಲು ಬಿಳಿಯ ಗೌನ್ ಧರಿಸಿದ್ದು ಸಾಂಪ್ರದಾಯಿಕ ವಿವಾಹ ಸಮಾರಂಭದಂತೆ ಮದುವೆಯಾದಳು. 
ನನಗೆ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಕಳೆದ 16 ವರ್ಷಗಳಿಂದ ಮದುವೆಯಾಗುವಂತೆ ಪೋಷಕರು ಒತ್ತಾಯಿಸುತ್ತಿದ್ದರು. ಮದುವೆಯಾಗುವುದಕ್ಕೆ ಇಷ್ಟವಿಲ್ಲದಿದ್ದರಿಂದ ಮುಂದೂಡುತ್ತಾ ಬಂದಿದೆ. ಆದರೆ ಈಗ ಒತ್ತಡ ಹೆಚ್ಚಾಗಿದ್ದರಿಂದ ನನ್ನ ಮದುವೆಯನ್ನು ನನ್ನೊಂದಿಗೆ ಮಾಡಿಕೊಂಡಿದ್ದೇನೆ ಎಂದು ಲುಲು ಹೇಳಿದ್ದಾರೆ. 
ಲುಲು ಜೆಮಿಯಾ ತನ್ನ ಮದುವೆಗೆ ಕರ್ಚು ಮಾಡಿದ್ದು ಕೇವಲ 195 ರುಪಾಯಿ ಮಾತ್ರ. ಜೆಮಿಯಾ ಸಹೋದರ ಮದುವೆಯ ಕೇಕ್ ನೀಡಿದ್ದು, ಸ್ನೇಹಿತೆ ವಧುವಿನ ಡ್ರೆಸನ್ನು ಬಾಡಿಗೆಗೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಖಾಲಿ ಖಾಲಿ: ಇಂಧನ ಪೂರೈಕೆ ಹೆಚ್ಚಿಸಲು ಡೀಲರ್‌ಗಳ ಆಗ್ರಹ; ರಾಜ್ಯಕ್ಕೂ ಕಾದಿದೆಯಾ ಡ್ರೈ ಡೇ?

ಮೈಸೂರು: ಕಾರಿನ ಬಾನೆಟ್ ಮೇಲೆ ನೇತಾಡುತ್ತಿದ್ದರೂ 400 ಮೀಟರ್ ಎಳೆದೊಯ್ದ ಆರ್​ಟಿಐ ಕಾರ್ಯಕರ್ತನ ಬಂಧನ; ಶಾಕಿಂಗ್ Video

Indian Stock Market: ಮಧ್ಯ ಪ್ರಾಚ್ಯ ಸಂಘರ್ಷ ಮುಂದುವರಿಕೆ, Sensex 135 ಅಂಕ ಕುಸಿತ, ರೂಪಾಯಿ ಮೌಲ್ಯ ಚೇತರಿಕೆ

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್! POK ಯಲ್ಲಿ ಗುಂಡಿಕ್ಕಿ ಹಮ್ಜಾ ಬುರ್ಹಾನ್ ಹತ್ಯೆ

Cockroach Janta Party ಅಬ್ಬರ: ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರಿಂದ ಐ ಆಮ್ ಕಾಕ್ರೋಚ್ ಟೀ ಶರ್ಟ್ ಬಿಡುಗಡೆ

SCROLL FOR NEXT