ರಷ್ಯಾ ಜೊತೆ ಪರಮಾಣು ಒಪ್ಪಂದವನ್ನು ಅಮೆರಿಕಾ ಮುರಿಯಲಿದೆ: ಡೊನಾಲ್ಡ್ ಟ್ರಂಪ್
ಶೀತಲ ಸಮರ ಸಂದರ್ಭದಲ್ಲಿ ರಷ್ಯಾ ಜೊತೆ ಮಾಡಿಕೊಂಡಿದ್ದ ಮಧ್ಯಂತರ ಶ್ರೇಣಿಯ ಪರಮಾಣು ...
ವಾಷಿಂಗ್ಟನ್: ಶೀತಲ ಸಮರ ಸಂದರ್ಭದಲ್ಲಿ ರಷ್ಯಾ ಜೊತೆ ಮಾಡಿಕೊಂಡಿದ್ದ ಮಧ್ಯಂತರ ಶ್ರೇಣಿಯ ಪರಮಾಣು ಪಡೆ(ಐಎನ್ಎಫ್) ಒಪ್ಪಂದದಿಂದ ಅಮೆರಿಕ ಹೊರಬರಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ರಷ್ಯಾ ಒಪ್ಪಂದವನ್ನು ಮುರಿದಿದೆ ಎಂದು ಅಮೆರಿಕಾ ಆರೋಪಿಸಿದೆ.
ನಾವು ಒಪ್ಪಂದವನ್ನು ಇಲ್ಲಿಗೇ ಮುರಿಯಲಿದ್ದು ಇದರಿಂದ ಹೊರಬರಲಿದ್ದೇವೆ, ಅದನ್ನು ಮುಂದುವರಿಸುವುದಿಲ್ಲ ಎಂದು ಟ್ರಂಪ್ ನಿನ್ನೆ ನೆವಾಡಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಅಮೆರಿಕಾ-ರಷ್ಯಾ ನಡುವಿನ ಮೂರು ದಶಕಗಳ ಒಪ್ಪಂದ ಇದಾಗಿದೆ. ನಾವು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದರು.
1987ರಲ್ಲಿ ಅಮೆರಿಕಾ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಮತ್ತು ರಷ್ಯಾ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ನಡುವೆ ನಡೆದ ಒಪ್ಪಂದ ಇದಾಗಿತ್ತು. 500-1,000 ಕಿಲೋಮೀಟರ್ ಅಥವಾ 310-620 ಮೈಲುಗಳು (ಸಣ್ಣ-ವ್ಯಾಪ್ತಿಯ) ಮತ್ತು 1,000-5,500 ಕಿಮೀ ಅಥವಾ 620-3,420 ಮೈಲಿಗಳು (ಮಧ್ಯಂತರ-ಶ್ರೇಣಿಯ) ವ್ಯಾಪ್ತಿಯೊಂದಿಗೆ ಅವುಗಳ ಉಡಾವಣಾ ಸಾಧನಗಳ ಮಧ್ಯಂತರ ಶ್ರೇಣಿಯ ಮತ್ತು ಕಡಿಮೆ ವ್ಯಾಪ್ತಿಯ ಕ್ಷಿಪಣಿಗಳ ಹೊರಹಾಕುವಿಕೆಯ ಒಪ್ಪಂದ ಇದಾಗಿತ್ತು. ಇದು ಎಲ್ಲಾ ಪರಮಾಣು ಮತ್ತು ಸಾಂಪ್ರದಾಯಿಕ ಕ್ಷಿಪಣಿಗಳನ್ನು ಹೊರಹಾಕುತ್ತದೆ.
ಈ ಹಳೆ ಒಪ್ಪಂದವನ್ನು ಮುರಿದಿದ್ದು ಹೊಸ ಒಪ್ಪಂದವನ್ನು ಚೀನಾ ಮತ್ತು ರಷ್ಯಾ ಒಪ್ಪಿಕೊಳ್ಳದಿದ್ದರೆ ನಾವೇ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ರಷ್ಯಾ ಒಪ್ಪಂದವನ್ನು ಮುರಿದಿದೆ. ಹಲವು ವರ್ಷಗಳಿಂದ ರಷ್ಯಾ ಇದನ್ನು ಮುರಿಯುತ್ತಾ ಬಂದಿದೆ, ಇನ್ನು ಮುಂದೆ ರಷ್ಯಾ ಪರಮಾಣು ಒಪ್ಪಂದವನ್ನು ಮುರಿಯಲು ಮುರಿದು ತಾವೇ ಶಸ್ತ್ರಾಸ್ತ್ರವನ್ನು ಮುರಿಯಲು ನಾವು ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.