ಅಮೆರಿಕಾ ಮಾಜಿ ಉಪಾಧ್ಯಕ್ಷ ಬಿಡನ್, ನಟ ರಾಬರ್ಟ್ ಡಿ ನೀರೋ ಮನೆಗೆ ಶಂಕಿತ ಸ್ಪೋಟಕ ಪಾರ್ಸಲ್!
ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಬಿಲ್ ಕ್ಲಿಂತನ್ ಮನೆಯ ವಿಳಾಸಕ್ಕೆ ಶಂಕಿತ ಸ್ಪೋಟಕ ಗಳಿರುವ ಪಾರ್ಸಲ್ ತಲುಪಿಸಲು ಯತ್ನಿಸಿದ್ದ ಬೆನ್ನಲ್ಲೇ ಇದೀಗ ಅಮೆರಿಕಾದ ಮಾಜಿ.....
ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಬಿಲ್ ಕ್ಲಿಂತನ್ ಮನೆಯ ವಿಳಾಸಕ್ಕೆ ಶಂಕಿತ ಸ್ಪೋಟಕ ಗಳಿರುವ ಪಾರ್ಸಲ್ ತಲುಪಿಸಲು ಯತ್ನಿಸಿದ್ದ ಬೆನ್ನಲ್ಲೇ ಇದೀಗ ಅಮೆರಿಕಾದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ನಟ ರಾಬರ್ಟ್ ಡಿ ನೀರೋ ಅವರ ವಿಳಾಸಕ್ಕೆ ಸಹ ಇಂತಹುದೇ ಶಂಕಿತ ಪಾರ್ಸಲ್ ಗಳು ಬಂದಿದೆ ಎಂದು ಅಮೆರಿಕಾ ಗುಪ್ತದಳ ಹೇಳಿದೆ.
ಗುರುವಾರ ಅಮೆಇಕಾದ ಮಾಜಿ ಉಪಾಧ್ಯಕ್ಷ ಬಿಡೆನ್ ಹಾಗೂ ನಟ ರಾಬರ್ಟ್ ಅವರುಗಳ ಮನೆ ವಿಳಾಸಕ್ಕೆ ಸಹ ಅನುಮಾನಾಸ್ಪದ ಪಾರ್ಸಲ್ ಕಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರವಷ್ಟೇ ಹಿಲರಿ ಕ್ಲಿಂಟನ್ ಹಾಗೂ ಒಬಾಮಾ ಅವರ ಮನೆಗೆ ಶಂಕಿತ ಸ್ಪೋಟಕಗಳನ್ನು ಕಳಿಸಲಾಗಿತ್ತು. ಇದೂ ಸಹ ಅಂತಹುದೇ ಪಾರ್ಸಲ್ ಆಗಿದೆ, ಇದೇ ನಿತ್ಟಿನಲ್ಲಿ ಈ ಪ್ರಕರಣವನ್ನು ಸಹ ಕ್ರಿಮಿನಲ್ ತನಿಖೆಗೆ ಒಳಪಡಿಸಲಾಗುತ್ತದೆ.