ಭಾರತ ಮತ್ತು ಅಮೆರಿಕಾ ಧ್ವಜ 
ವಿದೇಶ

ಭಾರತ, ಅಮೆರಿಕಾ 2+ 2 ಮಾತುಕತೆ; ಏನಿದು, ಇಲ್ಲಿದೆ ಮಾಹಿತಿ

ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವುದು ಭಾರತ ಮತ್ತು ಅಮೆರಿಕಾ ನಡುವಣ 2+2...

ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವುದು ಭಾರತ ಮತ್ತು ಅಮೆರಿಕಾ ನಡುವಣ 2+2 ಮಾತುಕತೆ. ಎರಡೂ ದೇಶಗಳ ಮಧ್ಯೆ ಕಾರ್ಯತಂತ್ರ ಜೋಡಣೆಗೆ ಸಹಕಾರಿ ಎಂದೇ ವರ್ಣಿಸಲಾಗುತ್ತಿದೆ. ಈ ಮಾತುಕತೆ ಮೇಲೆ ಅಪಾರ ನಿರೀಕ್ಷೆಯನ್ನು ಹೊಂದಲಾಗಿದೆ. ಹಾಗಾದರೆ ಈ 2+2 ಮಾತುಕತೆ ಎಂದರೇನು, ಇದರಲ್ಲಿ ಚರ್ಚೆಗೆ ಬರುವ ವಿಷಯಗಳು ಯಾವುದು ಎಂಬ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ-

2+2 ಮಾತುಕತೆ:
ಇದೇ ತಿಂಗಳ 6 ಮತ್ತು 7ರಂದು ದೆಹಲಿಯಲ್ಲಿ ಈ ಮಾತುಕತೆಯ ಉದ್ಘಾಟನೆ ಕಾರ್ಯಕ್ರಮವಿರುತ್ತದೆ. ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕೆಲ್ ಆರ್ ಪೊಂಪಿಯೊ ಮತ್ತು ರಕ್ಷಣಾ ಇಲಾಖೆ ಕಾರ್ಯದರ್ಶಿ ಜೇಮ್ಸ್ ಮಟ್ಟಿಸ್ ಜೊತೆ ಮಾತುಕತೆ ನಡೆಸಲಿದ್ದಾರೆ.

ಮುಂದೂಡಿದ್ದು ಏಕೆ:
ಈ ಹಿಂದೆ ಎರಡು ಬಾರಿ ಈ ನಿಗದಿತ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಆರಂಭದ ಮಾತುಕತೆ ಜುಲೈಯಲ್ಲಿ ನಿಗದಿಯಾಗಿತ್ತು. ಅನಿವಾರ್ಯ ಕಾರಣಗಳಿಂದ ಅಮೆರಿಕಾ ಸರ್ಕಾರವೇ ಮುಂದೂಡಿತ್ತು. ಅದಕ್ಕೂ ಮುನ್ನ ಏಪ್ರಿಲ್ ನಲ್ಲಿ ನಿಗದಿಯಾಗಿತ್ತು. ಆದರೆ ಅಮೆರಿಕ ಸೆನೆಟ್ ನಲ್ಲಿ ಅಲ್ಲಿನ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಭಾಗವಹಿಸುವುದು ನಿಶ್ಚಿತವಾಗದ ಕಾರಣ ಮುಂದೂಡಲಾಗಿತ್ತು. ಆ ಸಮಯದಲ್ಲಿ ಭಾರತ ಕೂಡ ಅಮೆರಿಕಾದ ಮಾತುಕತೆಯ ಅವಕಾಶವನ್ನು ನಿರಾಕರಸಿತ್ತು.

ಇದರ ಹಿನ್ನಲೆಯೇನು?: ಭಾರತ ಈ ಹಿಂದೆ ಇದೇ ರೀತಿಯ 2+2 ಮಾತುಕತೆಯನ್ನು ಜಪಾನ್ ಸರ್ಕಾರದೊಂದಿಗೆ ನಡೆಸಿತ್ತು. ಅದು ಕೂಡ ವಿದೇಶಾಂಗ ಸಚಿವರು ಮತ್ತು ರಕ್ಷಣಾ ಇಲಾಖೆ ಸಚಿವರ ಸಮ್ಮುಖದಲ್ಲಿ. ಕಳೆದ ವರ್ಷ 2017ರ ಜೂನ್ ನಲ್ಲಿ ಪ್ರಧಾನಿ ಮೋದಿಯವರು ಅಮೆರಿಕಾಕ್ಕೆ ಹೋಗಿದ್ದಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಎರಡೂ ದೇಶಗಳ ನಡುವೆ ಇರುವ ವ್ಯಾಪಾರ ಮತ್ತು ವಾಣಿಜ್ಯ ವಿವಾದಗಳನ್ನು ಬಗೆಹರಿಸಿ ಭಾರತ ಮತ್ತು ಅಮೆರಿಕಾ ನಡುವಣ ಆಯಕಟ್ಟಿನ ಸಂಬಂಧವನ್ನು ಹೆಚ್ಚಿಸುವುದು ಮತ್ತು ಭಾರತ-ಅಮೆರಿಕ ಕಾರ್ಯತಂತ್ರ ಮತ್ತು ವಾಣಿಜ್ಯ ಮಾತುಕತೆಯನ್ನು ಬದಲಾಯಿಸುವುದಾಗಿದೆ.

ಆಫ್ಘಾನಿಸ್ತಾನ:
ಭಾರತ ಆಪ್ಘಾನಿಸ್ತಾನದ ವಿರೋಧಿಯಲ್ಲ, ಹೀಗಿರುವುದರಿಂದ ಅಲ್ಲಿನ ಅಭಿವೃದ್ಧಿ ಕೆಲಸಗಳಿಗೆ ನೆರವಾಗಲು ಯತ್ನಿಸುತ್ತಿದೆ. ಪಾಕಿಸ್ತಾನ ಬೆಂಬಲಿತ ತಾಲಿಬಾನೀಯರೊಂದಿಗೆ ಮಾತುಕತೆಗೆ ಕೂಡ ಭಾರತ ಸಿದ್ಧವಿದ್ದು ಅದನ್ನು ಆರಂಭಿಸಿದ್ದು ಮೊದಲು ಅಮೆರಿಕಾ.

ಪಾಕಿಸ್ತಾನ: ಭಯೋತ್ಪಾದನೆಯನ್ನು ನಿಗ್ರಹಿಸಲು ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ತರಲು ಭಾರತ ಅಮೆರಿಕಾದ ಸಹಾಯವನ್ನು ಕೋರುತ್ತಿದೆ. ಪಾಕಿಸ್ತಾನದ ಹೊಸ ಸರ್ಕಾರದೊಂದಿಗೆ ಭಾರತ ಮಾತುಕತೆಗೆ ಮುಂದಾಗಬೇಕೆಂದು ಅಮೆರಿಕಾದ ಬಯಕೆಯಾಗಿದೆ.

ನಿರ್ಬಂಧಗಳು: ರಷ್ಯಾ ಮತ್ತು ಇರಾನ್ ಮೇಲೆ ಅಮೆರಿಕಾದ ನಿರ್ಬಂಧ  ಮತ್ತು ಅದರಿಂದ ಭಾರತದ ಮೇಲೆ ಆಗುವ ಪರಿಣಾಮ ಮಾತುಕತೆ ವೇಳೆ ಚರ್ಚೆಗೆ ಬರುವ ಸಾಧ್ಯತೆಯಿದೆ. ದೇಶದ ಹಿತಾಸಕ್ತಿಯಿಂದ ಇರಾನ್ ನಿಂದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವುದಾಗಿ ಭಾರತ ಹೇಳುತ್ತದೆ ಮತ್ತು ರಷ್ಯಾದಿಂದ 400 ಡಾಲರ್ ಮೊತ್ತದ ಟ್ರಯಂಫ್ ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ಖರೀದಿಸಲು ಕೂಡ ಮುಂದಾಗಿದೆ. ಕಳೆದ ವರ್ಷ ಭಾರತಕ್ಕೆ ಪೂರೈಸಿದ ತೈಲ ದೇಶಗಳಲ್ಲಿ ಇರಾನ್ ಮೂರನೇ ಸ್ಥಾನದಲ್ಲಿದೆ.

ಚರ್ಚೆಗೆ ಬರುವ ವಿಷಯಗಳು: ಎರಡೂ ದೇಶಗಳು ಕೇವಲ ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ಮಿಲಿಟರಿ ಸಹಕಾರ ವಿಷಯಗಳನ್ನು ಮಾತ್ರವಲ್ಲದೆ ಸ್ಥಳೀಯ ವಿಷಯಗಳು, ಚೀನಾ ಭಾರತದೊಂದಿಗೆ ಆಕ್ರಮಣಕಾರಿ ನಡೆ ಹೊಂದಿರುವ ಇಂಡೊ-ಫೆಸಿಫಿಕ್ ಪ್ರದೇಶದ ವಿಷಯಗಳು ಕೂಡ ಚರ್ಚೆಗೆ ಬರಲಿದೆ. ಉಭಯ ದೇಶಗಳ ನಾಯಕರ ಚರ್ಚೆ ವೇಳೆ ಚೀನಾ ವಿಷಯಗಳು ಹೆಚ್ಚು ಚರ್ಚೆಗೆ ಬರಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT