ಜಪಾನ್ ಉದ್ಯಮಿ ಯುಸುಕು ಮೆಯೆಝಾವಾ 
ವಿದೇಶ

ಸ್ಪೇಸ್ ಎಕ್ಸ್ ಚಂದ್ರಯಾನದ ಮೊದಲ ಪ್ರಯಾಣಿಕ ಜಪಾನ್ ಉದ್ಯಮಿ ಕೋಟ್ಯಾಧಿಪತಿ ಯುಸುಕು ಮೆಯೆಝಾವಾ

ದೈತ್ಯಾಕಾರದ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಚಂದ್ರನ ಸುತ್ತ 2023ರ ಆದಿಭಾಗದಲ್ಲಿ ಜಪಾನ್ ನ ...

ಹಾತ್ರೋನ್: ದೈತ್ಯಾಕಾರದ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಚಂದ್ರನ ಸುತ್ತ 2023ರ ಆದಿಭಾಗದಲ್ಲಿ ಜಪಾನ್ ನ ಶತಕೋಟಿ ಒಡೆಯ ಮತ್ತು ಆನ್ ಲೈನ್ ಫ್ಯಾಶನ್ ಉದ್ಯಮಿ ಯುಸುಕು ಮೆಯೆಝಾವಾ ಪ್ರಯಾಣಿಸಲಿದ್ದಾರೆ. ಅವರ ಜೊತೆ 6ರಿಂದ 8 ಮಂದಿ ಕಲಾವಿದರನ್ನು ಕರೆದೊಯ್ಯಲು ಅವರು ಯೋಜನೆ ನಡೆಸುತ್ತಿದ್ದಾರೆ.

42 ವರ್ಷದ ಯುಸುಕು ಮೆಯೆಝುವಾ 1972ರಲ್ಲಿ ಭೂಮಿಯ ಏಕೈಕ ಶಾಶ್ವತ ನೈಸರ್ಗಿಕ ಉಪಗ್ರಹವಾದ ಚಂದ್ರನಲ್ಲಿಗೆ ಪ್ರಯಾಣಿಸಿದ ಅಪೊಲೊ ಮಿಷನ್ ನಂತರ ಪ್ರಯಾಣಿಸುವ ಮೊದಲ ಪ್ರಯಾಣಿಕರಾಗಿದ್ದಾರೆ. ತಮ್ಮ ಪ್ರಯಾಣಕ್ಕೆ ಅವರು ಅನಿರ್ದಿಷ್ಟ ಮೊತ್ತವನ್ನು ಸ್ಪೇಸ್ ಎಕ್ಸ್ ಸಂಸ್ಥೆಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಾನು ಚಿಕ್ಕವನಿದ್ದಾಗಲೇ ನನಗೆ ಚಂದ್ರನೆಂದರೆ ಕುತೂಹಲ, ಇದು ನನ್ನ ಜೀವಾವಧಿಯ ಕನಸು ಎಂದು ಮೆಯೆಝುವಾ ಹೇಳಿದ್ದಾರೆ.

ಜಪಾನ್ ನ ಅತಿದೊಡ್ಡ ಆನ್ ಲೈನ್ ಫ್ಯಾಶನ್ ಮಾಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮೆಯೆಝುವಾ 3 ಶತಕೋಟಿ ಡಾಲರ್ ನ ಒಡೆಯರಾಗಿದ್ದು ಜಪಾನ್ ನ 18ನೇ ಅತಿ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ಮ್ಯಾಗಜೀನ್ ತಿಳಿಸಿದೆ. ಇವರು ಚಿತ್ರಕಲೆಗಳನ್ನು ಕೂಡ ಬಹಳ ಇಷ್ಟಪಡುವವರಾಗಿದ್ದಾರೆ. ಕಲೆ ಮೇಲಿನ ಪ್ರೀತಿಯಿಂದಾಗಿ ಚಂದ್ರನಲ್ಲಿಗೆ ಪ್ರಯಾಣಿಸುವಾಗ ತಮ್ಮ ಜೊತೆ ಕೆಲ ಕಲಾವಿದರನ್ನು ಕೂಡ ಆಹ್ವಾನಿಸಿದ್ದಾರೆ.

ಚಂದ್ರನಲ್ಲಿಗೆ ಪ್ರಯಾಣಿಸುವಾಗ ನನ್ನ ಜೊತೆ ವಿಶ್ವದಾದ್ಯಂತದಿಂದ 6ರಿಂದ 8 ಕಲಾವಿದರನ್ನು ಆಹ್ವಾನಿಸುತ್ತೇನೆ. ಅವರು ಭೂಮಿಗೆ ಹಿಂತಿರುಗಿದ ನಂತರ ಕಲಾವಿದರಾಗಿರುವುದರಿಂದ ಕಲೆಯ ಮೂಲಕ ಏನಾದರೊಂದು ಸೃಷ್ಟಿಸಬಹುದು, ಅದು ನಮ್ಮೊಳಗಿನ ಕನಸಿಗೆ ಪ್ರೇರಣೆಯಾಗಬಹುದು ಎಂದು ಮೆಯೆಝುವಾ ಹೇಳುತ್ತಾರೆ.

ಇದುವರೆಗೆ ಚಂದ್ರನಲ್ಲಿಗೆ ಅಮೆರಿಕಾದ ಖಗೋಳ ವಿಜ್ಞಾನಿಗಳು ಮಾತ್ರ ಪ್ರಯಾಣಿಸಿದ್ದರು. ಒಟ್ಟು 24 ನಾಸಾ ವಿಜ್ಞಾನಿಗಳು 1960ರಿಂದ 1970ರ ದಶಕದವರೆಗೆ ಪ್ರಯಾಣಿಸಿದ್ದವರು. 12 ಮಂದಿ ಚಂದ್ರನ ಮೇಲ್ಮೈಯಲ್ಲಿ ಪ್ರಯಾಣಿಸಿ ಬಂದಿದ್ದಾರೆ.

ಮೊದಲ ಬಾರಿಗೆ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದ್ದು ಅಮೆರಿಕಾದ ಉದ್ಯಮಿ ಡೆನ್ನಿಸ್ ಟಿಟೊ 2001ರಲ್ಲಿ, ರಷ್ಯಾದ ಅಂತರಿಕ್ಷ ಯಾನದಲ್ಲಿ ಪ್ರಯಾಣಿಸಲು ಸುಮಾರು 20 ದಶಲಕ್ಷ ಡಾಲರ್ ಖರ್ಚು ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: NDA ಸೀಟು ಹಂಚಿಕೆ ಅಂತಿಮ; ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ಇದೆಂಥಾ ಕ್ರೌರ್ಯ: ಮದ್ಯ ಮಾರಾಟ ನಿಷೇಧ ಉಲ್ಲಂಘಿಸಿದ್ದ ಬ್ರಾಹ್ಮಣನ ಟೀಕಿಸಿ ಪೋಸ್ಟ್; OBC ವ್ಯಕ್ತಿಗೆ ಅದೇ ಬ್ರಾಹ್ಮಣನ ಪಾದ ತೊಳೆದು ನೀರು ಕುಡಿಯುವ ಶಿಕ್ಷೆ!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ; ರಷ್ಯಾದ ಬಿಗ್ ವಾರ್ನಿಂಗ್ ಏನು?

SCROLL FOR NEXT