ಮೇರಿಲ್ಯಾಂಡ್(ಅಮೆರಿಕಾ): ಮಹಿಳೆಯೊಬ್ಬರು ಔಷಧಿ ವಿತರಣಾ ಕೇಂದ್ರದಲ್ಲಿ ನಡೆಸಿದ ಗುಂಡಿನ ದಾಳಿಯಿಂದಾಗಿ ಮೂವರು ಮೃತಪಟ್ಟು ಇಬ್ಬರಿಗೆ ಗಾಯಗಳಾದ ಘಟನೆ ಅಮೆರಿಕಾದ ಮೇರಿಲ್ಯಾಂಡಿನ ಫೆರಮನ್ ರೈಟ್ ಏಡ್ ಹಂಟಿಕಾ ಕೇಂದ್ರದಲ್ಲಿ ಸಂಭವಿಸಿದೆ.
ಘಟನೆಗೆ ಕಾರಣವಾದ ಮಹಿಳೆಯು ಇದೀಗ ಪೋಲೀಸರ ವಶದಲ್ಲಿದ್ದಾರೆ. ಮಹಿಳೆ ಈ ಕೃತ್ಯವೆಸಗಲು ಹ್ಯಾಂಡ್ ಗನ್ ಬಳಕೆ ಮಾಡಿದ್ದಾಗಿ ಪೋಲೀಸರು ಹೇಳಿದರು.
ಸ್ಥಳೀಯ ಕಾಲಮಾನ ಬೆಳಿಗ್ಗೆ 9ಕ್ಕೆ ಈ ಘಟನೆ ನಡೆದಿದೆ. ಮಹಿಳೆಗೆ ಆ ಸಂಸ್ಥೆಯಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿರುವ ಸಾಧ್ಯತೆಯನ್ನು ಪೋಲೀಸರು ಶಂಕಿಸಿದ್ದಾರೆ. ಆದರೆ ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ.
ರೈಟ್ ಏಡ್ ಕಟ್ಟಡದಲ್ಲಿ ಸುಮಾರು 1,000 ಜನರು ವಿತರಣಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇಲ್ಲಿ ಸುಮಾರು 2500 ಮಳಿಗೆಗಳಲ್ಲಿ ಔಷಧ ಸೇರಿ ಇತರೆ ವಸ್ತುಗಳ ಸರಬರಾಜು ನಡೆಯುತ್ತದೆ.
ಸಧ್ಯ ಘಟನಾ ಸ್ಥಳದಲ್ಲಿ ಶಾಂತಿ ನೆಲೆಸಿದ್ದು ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಸಿಎನ್ ಎನ್ ವರದಿ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos