ವಿದೇಶ

ತಾಂಜೇನಿಯ ದೋಣಿ ದುರಂತ: 136 ಮಂದಿ ಸಾವು, ಹಲವರು ನಾಪತ್ತೆ

Raghavendra Adiga
ದಾರ್ ಏಸ್ ಸಲಾಮ್(ತಾಂಜೇನಿಯಾ): ತಾಂಜೇನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕರ ದೋಣಿಯೊಂದು ಮಗುಚಿದ ಕಾರಣ ಕನಿಷ್ಟ 136 ಜನ ಸಾವನ್ನಪ್ಪಿದ್ದಾರೆ.
ನೀರಲ್ಲಿ ಮುಳುಗಿದವರ ಪತ್ತೆಗೆ ಪೋಲೀಸರು ಹಾಗೂ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು ಇದುವರೆಗೆ 136 ಮಂದಿಯ ಮೃತದೇಹ ಹೊರತೆಗೆಯಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚುವ ಸಾಧ್ಯತೆ ಇದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು 
ದೋಣಿಯಲ್ಲಿ ಸುಮಾರು 300ಪ್ರಯಾಣಿಕರು ಹಾಗೂ ಸರಕುಗಳನ್ನು ಸಾಗಣೆ ಮಾಡಲಾಗುತ್ತಿತು.ಗುರುವಾರ ಮಧ್ಯಾಹ್ನ ಉತಾರ ದ್ವೀಪದ ಹಡ್ಗುಕಟ್ಟೆಗೆ ೫೦ ಮೀ. ಅಂತರದಲ್ಲಿ ಮಗುಚಿದೆ.
ದುರಂತದ ಕುರಿತಂತೆ ತಾಂಜೇನಿಯಾ ಅಧ್ಯಕ್ಷ  ಜಾನ್ ಮಗುಫುಲಿ ನಾಲ್ಕು ದಿನಗಳ ಶೋಕಾಚರಣೆ ಘೊಷಿಸಿದ್ದಾರೆ. ಅಲ್ಲದೆ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಲಬಾರದೆಂದು ಎಚ್ಚರಿಕೆ ನೀಡಿದ್ದಾರೆ.
ಗೊತ್ತುಪಡಿಸಿದ ಅಧಿಕಾರಿಗಳು ತನಿಖೆ ಕೈಗೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
`
ದುರಂತಕ್ಕೀಡಾದ ದೋಣಿಯಲ್ಲಿ ಬಾಳೆಗೊನೆ, ಮೆಕ್ಕೆಜೋಳ ಹಾಗೂ ಸಿಮೆಂಟ್ ಚೀಲಗಳನ್ನೂ ತುಂಬಲಾಗಿತ್ತು. ಅದರ ನೈಜ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಭಾರ ಹೇರಲಾಗಿತ್ತು ಎನ್ನಲಾಗಿದೆ. ಆದರೆ ಘಟನೆಗೆ ನೈಜ ಕಾರಣ ಇನ್ನೂ ಪತ್ತೆಯಾಗಿಲ್ಲ.
SCROLL FOR NEXT