ಡೊನಾಲ್ಡ್ ಟ್ರಂಪ್ 
ವಿದೇಶ

ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವುದರಲ್ಲಿ ಭಾರತ ಯಶಸ್ವಿ: ಟ್ರಂಪ್

ಬಡತನದಿಂದ ಲಕ್ಷಾಂತರ ಜನರನ್ನು ಮೇಲೆತ್ತುವುದರಲ್ಲಿ ಭಾರತದ ಪ್ರಯತ್ನಕ್ಕೆ ವಿಶ್ವದ ಹಿರಿಯಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್ :ಬಡತನದಿಂದ ಲಕ್ಷಾಂತರ ಜನರನ್ನು ಮೇಲೆತ್ತುವುದರಲ್ಲಿ ಭಾರತದ ಪ್ರಯತ್ನಕ್ಕೆ ವಿಶ್ವದ ಹಿರಿಯಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 73 ನೇ  ಅಧಿವೇಶನದಲ್ಲಿ ಎರಡನೇ ಬಾರಿಗೆ  ಮಾತನಾಡಿದ ಅವರು, ಭಾರತದಲ್ಲಿ ಅಸಂಖ್ಯಾತ ಲಕ್ಷಾಂತರ ಜನರನ್ನು ಬಡತನದಿಂದ  ಮೇಲೆತ್ತಿ ಮಧ್ಯಮವರ್ಗಕ್ಕೆ  ತರಲಾಗಿದೆ ಎಂದು ಹೇಳಿದರು.

35 ನಿಮಿಷಗಳ ಕಾಲ ಸುಧೀರ್ಘ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್,  ಅನೇಕ ರಾಷ್ಟ್ರಗಳ ಜನರು ತಮ್ಮ ರಾಷ್ಟ್ರದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲು ಬಂದಿದ್ದಾರೆ.  ಅವರೆಲ್ಲರ ಭಾಷಣಗಳು, ನಿರ್ಣಯಗಳು ಮತ್ತು  ಪ್ರತಿಯೊಂದು ವಿಶ್ವ ಹಾಗೂ ಪ್ರತಿಯೊಬ್ಬರ ಭರವಸೆಗಳು ನಮ್ಮ ಚಿಂತನೆಗಳಾಗಿಯೇ ಬದಲಾಗಿ   ಅದೇ ಪ್ರಶ್ನೆ ಮೂಡುತ್ತದೆ ಎಂದರು.

ಮುಂದಿನ ಪೀಳಿಗೆಯ ಮಕ್ಕಳಿಗೆ ನಾವು ಯಾವ ರೀತಿಯ ಜಗತ್ತನ್ನು ಬೀಡುತ್ತೇವೆ ಮತ್ತು ಅವರು ಯಾವ ರೀತಿಯ ರಾಷ್ಟ್ರಗಳನ್ನು ಆನುವಂಶಿಕವಾಗಿ ಪಡೆಯುತ್ತೇವೆ ಎಂಬ ಪ್ರಶ್ನೆ ಇದೆ ಎಂದು ಟ್ರಂಪ್ ಹೇಳಿದರು.

ವಿವಿಧ  ದೇಶಗಳ ಪ್ರತಿನಿಧಿಗಳಿಂದ ವಿಶ್ವಸಂಸ್ಥೆ ಸಾಮಾನ್ಯ ಸಭೆ ಸಭಾಂಗಣ ತುಂಬಿದ್ದು, ಇದಕ್ಕೆ ನಿಜವಾಗಿಯೂ ವಿಶೇಷವಾದ ಇತಿಹಾಸವಿದೆ .ಸೌದಿ ಅರೇಬಿಯಾದ  ಹೊಸ ಸುಧಾರಣೆಗಳು  ಮತ್ತು ಇಸ್ರೇಲ್ ಪವಿತ್ರ ದೇಶದಲ್ಲಿ  ಪ್ರಜಾಪ್ರಭುತ್ವದ  70 ನೇ ವಾರ್ಷಿಕೋತ್ಸವವನ್ನು "ಹೆಮ್ಮೆಯಿಂದ ಆಚರಿಸುತ್ತಿದ್ದಾರೆ" ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT