ನೈಜಿರಿಯಾ : ಶಸ್ತ್ರ ಸಜ್ಜಿತ ವ್ಯಕ್ತಿಯಿಂದ ದಾಳಿ : 12 ಮಂದಿ ನಾಗರಿಕರ ಹತ್ಯೆ !
ನೈಜಿರಿಯಾದ ಗಡಿ ಪ್ರದೇಶ ಮಾಲಿ ಬಳಿ ಶಸ್ತ್ರ ಸಜ್ಜಿತ ಅಪರಿಚಿತ ವ್ಯಕ್ತಿಯೊಬ್ಬ ಮೋಟಾರ್ ಸೈಕಲ್ ನಲ್ಲಿ ಬಂದು ನೊಮ್ಯಾಡಿಕ್ ಸಮುದಾಯದ ಜನರ ಮೇಲೆ ದಾಳಿ ನಡೆಸಿದ್ದು, 12 ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದಾನೆ.
ಬಾಮಾಕೊ: ನೈಜಿರಿಯಾದ ಗಡಿ ಪ್ರದೇಶ ಮಾಲಿ ಬಳಿ ಶಸ್ತ್ರ ಸಜ್ಜಿತ ಅಪರಿಚಿತ ವ್ಯಕ್ತಿಯೊಬ್ಬ ಮೋಟಾರ್ ಸೈಕಲ್ ನಲ್ಲಿ ಬಂದು ನೊಮ್ಯಾಡಿಕ್ ಸಮುದಾಯದ ಜನರ ಮೇಲೆ ದಾಳಿ ನಡೆಸಿದ್ದು, 12 ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದಾನೆ.
ಪಶ್ಚಿಮ ಮೇನಕಾದಿಂದ 45 ಕಿಲೋ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ ಎಂದು ತೌರೆಗ್ ಸ್ವಯಂ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮೌಸಾ ಅಗ್ ಅಚಾರಾತೌಮಾನೆ ತಿಳಿಸಿದ್ದಾರೆ.
ಮೇನಕಾದಲ್ಲಿ ಅಂತರ್ ಕೋಮುಗಳ ನಡುವಿನ ಘರ್ಷಣೆ ಹಾಗಾಗ್ಗೇ ಸಂಭವಿಸುತ್ತಿದ್ದು, ಈ ವರ್ಷದಲ್ಲಿ ಸುಮಾರು 100 ನಾಗರಿಕರು ಮೃತಪಟ್ಟಿದ್ದಾರೆ . ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯಪಾಲ ದೌದಾ ಮೈಗಾ ಹೇಳಿದ್ದಾರೆ.
ಆದರೆ, ಈವರೆಗೂ ಯಾವುದೇ ಸಂಘಟನೆ ಈ ದಾಳಿಯ ಹೊಣೆ ಹೊತ್ತಿಕೊಂಡಿಲ್ಲ. ಕೆಲವು ತಿಂಗಳುಗಳ ಹಿಂದೆ ಇದಾರ್ಫೇನ್ ಸಮುದಾಯದ ಮೇಲೆ ಆಕ್ರಮಣಕಾರರು ದಾಳಿ ನಡೆಸಿದ್ದರು ಎಂದು ಅವರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.