ರನ್ ವೇ ಯಿಂದ ಸರೋವರಕ್ಕೆ ಬಿದ್ದ ವಿಮಾನ: ಎಲ್ಲಾ ಪ್ರಯಾಣಿಕರ ರಕ್ಷಣೆ
ಮಜುರೊ: ವಿಮಾನವೊಂದು ರನ್ ವೇ ಯಿಂದ ಸರೋವರಕ್ಕೆ ಬಿದ್ದು ಪ್ರಯಾಣಿಕರೂ ಪ್ರಾಣ ರಕ್ಷಣೆಗಾಗಿ ಈಜಿರುವ ಘಟನೆ ಮಜುರೊದಲ್ಲಿ ನಡೆದಿದೆ.
ನಿಯುಗಿನಿ ಬೋಯಿಂಗ್ 737-800 ವಿಮಾನ ಮೈಕ್ರೋನೇಶಿಯಾದ ವೆನೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿತ್ತು. ಆದರೆ ಈ ಸಂದರ್ಭದಲಿ ಉಂಟಾದ ಪ್ರಮಾದದಿಂದಾಗಿ ಚುಕ್ ಸರೋವರದಲ್ಲಿ ಬಿದ್ದಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪ್ರಯಾಣಿಕರ ನೆರವಿಗೆ ಧಾವಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಏರ್ ನಿಯುಗಿನಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ. ಈ ವಿಮಾನ ಈ ಹಿಂದಿನ ವರ್ಷವೂ ಸಹ ಮತ್ತೊಂದು ವಿಮಾನಕ್ಕೆ ಎದುರಾಗಿ ಅಪಘಾತಕ್ಕೀಡಾಗಿತ್ತು ಎಂದು ತಿಳಿದುಬಂದಿದೆ. ಲ್ಯಾಂಡಿಂಗ್ ವೇಳೆ ಹದಗೆಟ್ಟಿದ್ದ ವಾತಾವರಣ ಹಾಗೂ ಮಳೆಯಿಂದಾಗಿ ಈ ಅವಗಢ ಸಂಭವಿಸಿದೆ ಎಂದು ತಿಳಿದುಬಂದಿದೆ.