ವಿದೇಶ

ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಿಸಿದ ಯೂನಿಯನ್ ಬ್ಯಾಂಕ್

Raghavendra Adiga
ಬೀಜಿಂಗ್: ಭಾರತೀಯ ಬ್ಯಾಂಕ್ ಗಳಿಗೆ ಕೋಟ್ಯಾಂತರ ರು. ಸಾಲ ಬಿಟ್ಟು ವಿದೇಶಗಳಿಗೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ವಿರುದ್ಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಂಗ್ ಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಿಸಿದೆ ಎಂದು ಮಾದ್ಯಮ ವರದಿಯೊಂದು ಹೇಳಿದೆ.
ನೀರವ್ ಮೋದಿಗೆ ಸೇರಿದ್ದ ಎರಡು ಸಂಸ್ಥೆಗಳು ಯೂನಿಯನ್ ಬ್ಯಾಂಕ್ ಗೆ 5.49 ದಶಲಕ್ಷ ಡಾಲರ್ ಮೊತ್ತಕ್ಕೆ ಹೆಚ್ಚಿನ ಸಾಲವನ್ನು ಮರುಪಾವತಿಸದೆ ವಂಚಿಸಿದೆ ಎಂದು ಆರೋಪಿಸಿ ಬ್ಯಾಂಕ್ ಹಾಂಗ್ ಕಾಂಗ್ ನ್ಯಾಯಾಲಯದ ಮೊರೆ ಹೋಗಿದೆ.
ಮುಂಬೈ ಮೂಲದ ವಜ್ರದ ವ್ಯಾಪಾರಿ ಈರವ್ ಮೋದಿ ಭಾರತದ ಅತಿ ದೊಡ್ಡ ಹಣಕಾಸು ಅವ್ಯವಹಾರದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.ಈತ 21 ಅಕ್ಟೋಬರ್ 2011 ರಂದು ಫೈರ್ಸ್ಟೋನ್ ಟ್ರೇಡಿಂಗ್ ಪ್ರೈವೇಟ್ ಹಾಗೂ  15 ನವೆಂಬರ್ 2011 ರಂದು ಫೈರ್ಸ್ಟಾರ್ ಡೈಮಂಡ್ ಸಂಸ್ಥೆಗಳ ಹೆಸರಿನಲ್ಲಿ ಪಡೆದ ಸಾಲಕ್ಕೆ ಖಾತರಿ ನೀಡಿದ್ದರು.ಎಂದು ಬುಧವಾರ ಹಾಂಗ್ ಕಾಂಗ್ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಬ್ಯಾಂಕ್ ತಿಳಿಸಿದೆ ಎನ್ನುವುದಾಗಿ "ಸೌತ್ ಚೀನಾ ಮಾರ್ನಿಂಗ್ ಪೋಸ್ಟ್" ವರದಿ ಂಆಡಿದೆ.
ಹಾಂಗ್ ಕಾಂಗ್ ನಿಂದ ನ್ಯೂಯಾರ್ಕ್ ವರೆಗೆ ಹಲವು ಆಭರಣ ಮಳಿಗೆಗಳನ್ನು ಹೊಂದಿರುವ ನೀರವ್ ಮೋದಿ ಕಡೆಯಿಂದ ಬ್ಯಾಂಕ್ ಗೆ  5.49 ಮಿಲಿಯನ್ ಡಾಲರ್ ಗೆ ಹೆಚ್ಚು ಹಣ ಸಂದಾಯವಾಗಬೇಕೆಂದು ಹೇಳಲಾಗಿದೆ.
ಭಾರತ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ನಿಂದ ಪಡೆದಿದ್ದ 13,400 ಕೋಟಿ ರೂ ಸಾಲ ಬಾಕಿ ಹೊಂದಿರುವ ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದು ಈತನ ವಿರುದ್ಧ ಭ್ರತೀಯ ತನಿಖಾ ಸಂಸ್ಥೆಗಳು ಇದಾಗಲೇ ತನಿಖೆ ಪ್ರಾರಂಭಿಸಿದೆ. ಮೋದಿ ಮತ್ತು ಅವರ ಚಿಕ್ಕಪ್ಪ ಮತ್ತು ಉದ್ಯಮಿ ಮೆಹುಲ್ ಚೋಕ್ಸಿ ಇಬ್ಬರೂ ಭಾರತದ ಅನೇಕ ಬ್ಯಾಂಕ್ ಗಳಲ್ಲಿ ನಕಲಿ ಸಾಲ ಮಂಜೂರು ಪತ್ರಗಳನ್ನು ನೀಡಿ ಸಾವಿರಾರು ಕೋಟಿ ಸಾಲ ಪಡೆದಿದ್ದು ಬೃಹತ್ ಹಣಕಾಸು ವಂಚನೆ ನಡೆಸಿದ್ದಾರೆ.
SCROLL FOR NEXT