ಸಂಗ್ರಹ ಚಿತ್ರ 
ವಿದೇಶ

ವಿದೇಶಗಳಿಂದ ಹಣದ ರವಾನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ, 2018ರಲ್ಲಿ 79 ಶತಕೋಟಿ ಡಾಲರ್ ರವಾನೆ

ಭಾರತವು ಅಗ್ರ ವಿದೇಶೀ ಹೂಡಿಕೆದಾರ ರಾಷ್ಟ್ರದ ಸ್ಥಾನಮಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. 2018 ರಲ್ಲಿ 79 ಶತಕೋಟಿ ಡಾಲರ್ ಹಣವನ್ನು ವಿದೇಶಗಳಿಂದ ಬಾರತಕ್ಕೆ ಕಳುಹಿಸಲಾಗಿದೆ.

ವಾಷಿಂಗ್ಟನ್: ಭಾರತವು ಅಗ್ರ ವಿದೇಶೀ ಹೂಡಿಕೆದಾರ ರಾಷ್ಟ್ರದ ಸ್ಥಾನಮಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. 2018 ರಲ್ಲಿ 79 ಶತಕೋಟಿ ಡಾಲರ್ ಹಣವನ್ನು ವಿದೇಶಗಳಿಂದ ಬಾರತಕ್ಕೆ ಕಳುಹಿಸಲಾಗಿದೆ. ಈ ಮೂಲಕ ಭಾರತವು ತನ್ನ ದೇಶದ ವಿದೇಶಿ ಹೂಡಿಕೆದಾರರ ಸ್ಥಾನಮಾನವನ್ನು ಉಳಿಸಿಕೊಂಡಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ.
ಭಾರತದ ಬಳಿಕ ಈ ಪಟ್ಟಿಯಲ್ಲಿ ಚೀನಾ  (67 ಶತಕೋಟಿ ಡಾಲರ್), , ಮೆಕ್ಸಿಕೊ (36 ಶತಕೋಟಿ ಡಾಲರ್), ಫಿಲಿಪೈನ್ಸ್ (34 ಶತಕೋಟಿ ಡಾಲರ್) ಮತ್ತು ಈಜಿಪ್ಟ್ (29 ಶತಕೋಟಿ ಡಾಲರ್). ರಾಷ್ಟ್ರಗಳಿದೆ.
ವಿಶ್ವ ಬ್ಯಾಂಕಿನ ವಲಸೆ ಮತ್ತು ಅಭಿವೃದ್ಧಿ ವಿಭಾಗದ ಸಂಕ್ಷಿಪ್ತ ಅಂಕಿ ಅಂಶಗಳ ವರದಿಯ ಆಧಾರದಲ್ಲಿ ಭಾರತವು ಹಣ ಪಾವತಿ ಮಾಡುವಲ್ಲಿ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತ ವಿದೇಶಗಳಿಂದ ಪಡೆದ ಹಣದಲ್ಲಿ ಹೆಚ್ಚಳವಾಗುತ್ತಾ ಬಂದಿದೆ 2016 ರಲ್ಲಿ 62.7 ಶತಕೋಟಿ ಡಾಲರ್ ಹಣ ಹರಿದು ಬಂದರೆ 2017 ರಲ್ಲಿ  65.3 ಶತಕೋಟಿ ಡಾಲರ್ ಹಣ ಬಂದಿತ್ತು.
"ಈ ಸಆಲಿನಲ್ಲಿ ಭಾರತಕ್ಕೆ ಶೇ.14ರಷ್ಟು ಹೆಚ್ಚುವರಿ ಹಣ ಹರಿದು ಬಂದಿದೆ. ಕೇರಳದ ಪ್ರವಾಹ ವಿಪತ್ತಿನ ಹಿನ್ನೆಲೆಯಲ್ಲಿ ಅನೇಕ ವಲಸಿಗರು ತಮ್ಮ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಇಡಿದ್ದು ಈ ಹೆಚ್ಚಳಕ್ಕೆ ಕಾರಣವಾಗಿದೆ."
ಇದೇ ವೇಳೆ ಸೌದಿ ಅರೇಬಿಯಾದಲ್ಲಿ ಉಂಟಾದ ಹಣದುಬ್ಬರದ ಕಾರಣ ಪಾಕಿಸ್ತಾನಕ್ಕೆ ಹಣದ ಪೂರೈಕೆ ವ್ಯತ್ಯಯವಾಗಿದೆ.ಏಳು ಶೇ. ದಷ್ಟು ಹಣದ ಹರಿವಿನ ಪ್ರಮಾಣ ಇಳಿದಿದೆ ಎಂದು ಬ್ಯಾಂಕ್ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT