ವಿದೇಶ

ಎಫ್ -16 ಪತನದ ಕುರಿತ ಐಎಎಫ್ ಪುರಾವೆ ಸುಳ್ಳು, ರಾಡಾರ್ ಚಿತ್ರಗಳು ನಿಜವಲ್ಲ ಎಂದ ಪಾಕ್

Raghavendra Adiga
ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಸೇರಿದ್ದ ಎಫ್ -16 ಯುದ್ಧ ವಿಮಾನವನ್ನು ಭಾರತದ ವಾಯುಪಡೆ ಫೆಬ್ರವರಿ 27ರಂದು ಹೊಡೆದುರುಳಿಸಿರುವ ಕುರಿತು ಸೋಮವಾರ ವಾಯ್ಪಡೆ ಮುಖ್ಯಸ್ಥರು ಅಧಿಕೃತ ಸಾಕ್ಷಿಯನ್ನು ಬಹಿರಂಗಪಡಿಸಿದ್ದಾರೆ.  ಆದರೆ ಪಾಕಿಸ್ತಾನ ಭಾರತ ನಮಗೆ ಸೇರಿದ್ದ ಎಫ್ -16 ಉರುಳಿಸಿದೆ ಎನ್ನುವುದಕ್ಕೆ ಇನ್ನೂ ಯಾವುದೇ ಸಾಕ್ಷಿಯನ್ನು ನೀಡಲು ವಿಫಲವಾಗಿದೆ ಎಂದು ತನ್ನ ಮೊಂಡುವಾದವನ್ನೇ ಮುಂದುವರಿಸಿದೆ.
ವಾಯುದಾಳಿಯ ಸಮಯದಲ್ಲಿ ಪಕಿಸ್ತಾನದ ಎಫ್ -16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ ಕುರಿತು  ಭಾರತೀಯ ವಾಯುಪಡೆಯು ಸೋಮವಾರ ರಾಡಾರ್ ಚಿತ್ರಗಳ ಆಧಾರವನ್ನು ಬಹಿರಂಗ ಮಾಡಿದೆ. ಅಲ್ಲದೆ ಇದು "ನಿರಾಕರಿಸಲಾಗದ ಸಾಕ್ಷ್ಯ"  ಎಂದೂ ಹೇಳಿದೆ.
ಆದರೆ ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿ "ಸುಳ್ಳುಗಳನ್ನು ಪುನರಾವರ್ತಿಸಿ ಹೇಳಿದ ಮಾತ್ರಕ್ಕೆ ಸತ್ಯವಾಗುವುದಿಲ್ಲ. ಎಫ್ -16 ಹೊಡೆದುರುಳಿಸಿದ ಬಗ್ಗೆ ಚಿತ್ರಗಳನ್ನು ತೋರಿಸಿದ ಹೊರತಾಗಿಯೂ  ಐಎಎಫ್ ಇನ್ನೂ ಖಚಿತ ಸಾಕ್ಷ್ಯವನ್ನು ನೀಡುವ ಮೂಲಕ ಸಾಬೀತು ಪಡಿಸಿಲ್ಲ" ಎಂದಿದ್ದಾರೆ.
ಸೋಮವಾರ ಪಾಕಿಸ್ತಾನ ಜೆಟ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಭಾರತ ಬಳಕೆ ಮಾಡಿದ್ದ ಐಎಎಫ್ ಸುಖೋಯ್ ಎಂಕೆಐ, ಮಿರಾಜ್ 2000 ಮತ್ತು ಮಿಗ್ 21 ಬೈಸನ್ ಫೈಟರ್ ಜೆಟ್ ಗಳ ರಾಡಾರ್ ದಾಖಲಾತಿ ಸಂಗ್ರಹವನ್ನೂ ವಾಯುಸೇನೆ ಬಿಡುಗಡೆ ಮಾಡಿದ್ದು ಈ ಮೂಲಕ ಪಾಕ್ ಯುದ್ಧ ವಿಮಾನ ಪತನವನ್ನು ಜಗಜ್ಜಾಹೀರುಗೊಳಿಸಿದೆ. ಈ ಮೂಲಕ ಅಮೆರಿಕ ಪತ್ರಿಕೆ 'ಫಾರಿನ್ ಪಾಲಿಸಿ' ವರದಿ ಸುಳ್ಳು ಎಂದು ಸಾಬೀತಾಗಿದೆ.
ಅಮೆರಿಕ ಪತ್ರಿಕೆ 'ಫಾರಿನ್ ಪಾಲಿಸಿ' ಪತ್ರಿಕೆಯು ಅಮೆರಿಕಾ ಸೇನೆ ಪಾಕಿಸ್ತಾನಕ್ಕೆ ನೀಡಿದ್ದ ಎಫ್ -16  ಯುದ್ಧ ವಿಮಾನಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, ಅಂದು ಭಾರತ ಪಾಕಿಸ್ತಾನದ ಎಫ್ -16  ಹೊಡೆದುರುಳಿಸಿದ್ದು ಸುಳ್ಳು ಎಂದು ವರದಿ ಮಾಡಿತ್ತು.
SCROLL FOR NEXT