ಗೆಲುವು ಸಾಧಿಸಿದ ಬೆಂಜಮಿನ್ ನೆತನ್ಯಾಹು
ಜೆರುಸಲೆಂ: ತೀವ್ರ ಕುತೂಹಲ ಕೆರಳಿಸಿದ್ದ ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಸತತ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ.
ಇಸ್ರೇಲ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೆತನ್ಯಾಹು ನೇತೃತ್ವದ ಲಿಕುಡ್ ಮತ್ತು ಅದರ ಮೈತ್ರಿ ಪಕ್ಷಗಳು 65 ಸ್ಥಾನಗಳನ್ನು ಪಡೆಯುವ ಮೂಲಕ ಸತತ ಐದನೇ ಬಾರಿಗೆ ಬೆಂಜಮಿನ್ ನೆತನ್ಯಾಹು ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ.
ಇಸ್ರೇಲ್ ಸಂಸತ್ ನ ಒಟ್ಟು 120 ಸ್ಥಾನಗಳ ಪೈಕಿ ನೆತನ್ಯಾಹು ನೇತೃತ್ವದ ಲಿಕುಡ್ ಮತ್ತು ಅದರ ಮಿತ್ರ ಪಕ್ಷಗಳು 65 ಸ್ಥಾನ ಗಳಿಸಿದ್ದು, ಲಿಕುಡ್ ಎದುರಾಳಿ ಪಕ್ಷವಾದ ಕಹೋಲ್ ಲವನ್ ಮತ್ತು ಅದರ ಮಿತ್ರ ಪಕ್ಷಗಳು 55 ಸ್ಥಾನ ಗಳಿಸಿವೆ. ಆ ಮೂಲಕ 10 ಸ್ಥಾನಗಳ ಅಂತರದಲ್ಲಿ ನೆತನ್ಯಾಹು ಅವರು ಮತ್ತೆ ಇಸ್ರೇಲ್ ನಲ್ಲಿ ಅಧಿಕಾರದ ಗದ್ದುಗೆಗೆ ಏರಿದ್ದಾರೆ.
ಬೆಂಜಮಿನ್ ನೆತನಾಹ್ಯು ನೇತೃತ್ವದ ಲಿಕುಡ್ ಪಾರ್ಟಿ, ಮಾಜಿ ಸೇನಾ ಮುಖ್ಯಸ್ಥ ಬೆನ್ನಿ ಗಂಟ್ಜ್ ಅವರ ಸೆಂಟ್ರಿಸ್ಟ್ ಬ್ಯೂ ಅಂಡ್ ವೈಟ್ ಮೈತ್ರಿಕೂಟಕ್ಕಿಂತ ಭಾರೀ ಮುನ್ನಡೆ ಸಾಧಿಸಿದೆ. ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಮತ್ತು ಅವರ ಎದುರಾಳಿ ಪಕ್ಷ ಕಹೋಲ್ ಲವನ್ ಪಕ್ಷ ತಲಾ 35 ಸ್ಥಾನಗಳನ್ನು ಗಳಿಸಿ ಸಮಬಲ ಸಾಧಿಸಿದ್ದವಾದರೂ ಲಿಕುಡ್ ಮಿತ್ರ ಪಕ್ಷಗಳಾ ಎಡಪಕ್ಷಗಳು ಕೂಡ 30 ಸ್ಥಾನಗಳಿಸುವುದರೊಂದಿಗೆ ನೆತಾನ್ಯಹು ಮತ್ತೆ ಇಸ್ರೇಲ್ ಪ್ರಧಾನಿಯಾಗುವುದು ಖಚಿತವಾಗಿದೆ. ಇದರೊಂದಿಗೆ ಇಸ್ರೇಲ್‍ನಲ್ಲಿ ಮತ್ತೆ ಬಲಪಂಥೀಯ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
69 ವರ್ಷಗಳ ಪ್ರಧಾನಮಂತ್ರಿ ನೆತನ್ಯಾಹು ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದರೂ ಅವರು ಐದನೆ ಬಾರಿ ಪ್ರಧಾನಿಯಾಗುವ ಮೂಲಕ ದೇಶದ ಅತ್ಯುನ್ನತ ಹುದ್ದೆಯಲ್ಲಿ ದೀರ್ಘಾವಧಿ ಮುಂದುವರಿದ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮೂಲಗಳ ಪ್ರಕಾರ ಈವರೆಗೆ ಶೇ.97ರಷ್ಟು ಮತ ಎಣಿಕೆಯಾಗಿದ್ದು, 120 ಸದಸ್ಯ ಬಲದ ಸಂಸತ್ತಿನಲ್ಲಿ ಲಿಕುಡ್ ಮತ್ತು ಮಿತ್ರ ಪಕ್ಷಗಳು 65 ಸ್ಥಾನಗಳನ್ನು ಗಳಿಸಿ ಮುನ್ನಡೆಯಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲವು ಕ್ಷೇತ್ರಗಳ ಮತ ಎಣಿಕೆ ಮುಂದುವರಿದಿದ್ದು, ಲಿಕುಡ್ ಪಕ್ಷದ ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.
ಈಗಾಗಲೇ ರಾಜಧಾನಿ ಟೆಲ್ ಅವೀವ್ ನಲ್ಲಿರುವ ಲಿಕುಡ್ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos