ವಿದೇಶ

ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಹಿಂದೆ ಬಿದ್ದ ಭಾರತ

Nagaraja AB

ಲಂಡನ್:  2019ರ ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತ 180 ರಾಷ್ಟ್ರಗಳ ಪೈಕಿಯಲ್ಲಿ 140 ನೇ ಸ್ಥಾನಕ್ಕೆ ಇಳಿದಿದೆ. ಸಂಸತ್ತಿಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ವಿಶೇಷವಾಗಿ  ಪತ್ರಕರ್ತರಿಗೆ ಅಪಾಯಕಾರಿ ಸಂದರ್ಭವಾಗಿದೆ ಎಂದು  ಅಂತಾರಾಷ್ಟ್ರೀಯ ವಾಚ್ ಡಾಗ್ ರಿಪೋರ್ಟರ್ಸ್  ವಿಥೌಟ್ ಬಾರ್ಡರ್ಸ್ ವರದಿಯಲ್ಲಿ ಹೇಳಲಾಗಿದೆ.

ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2019ರಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದು, ವಿಶ್ವದಾದ್ಯಂತ ಪತ್ರಕರ್ತರ ಮೇಲೆ  ಹಗೆತನ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಹಿಂಸಾತ್ಮಕ ದಾಳಿಯಿಂದಾಗಿ ಕಳೆದ ವರ್ಷ ಭಾರತದಲ್ಲಿ ಆರು ಪತ್ರಕರ್ತರು ಹತ್ಯೆಯಾಗಿತ್ತು.

ಪೊಲೀಸ್ ಹಿಂಸಾಚಾರ, ನಕ್ಸಲೀಯರ ದಾಳಿ, ಭ್ರಷ್ಟ ರಾಜಕಾರಣಿಗಳು ಅಥವಾ ಕ್ರಿಮಿನಲ್ ಗುಂಪುಗಳಿಂದಾಗಿ ಭಾರತ ಪತ್ರಿಕ ಸ್ವಾತಂತ್ರ ಸೂಚ್ಯಂಕದಲ್ಲಿ ಇಳಿಕೆಗೆ ಕಾರಣವಾಗಿದೆ. 2018ರಲ್ಲಿ ಕನಿಷ್ಠ 6 ಮಂದಿ ಭಾರತೀಯ ಪತ್ರಕರ್ತರ ಹತ್ಯೆಯಾಗಿತ್ತು ಎಂದು ಸೂಚ್ಯಂಕದಲ್ಲಿ ಹೇಳಲಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ  ಇಂಗ್ಲೀಷ್ ಯೇತರ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಹೆಚ್ಚಾಗಿ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ. 2019ರ ಚುನಾವಣೆ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಬೆಂಬಲಿಗರಿಂದ ಪತ್ರಕರ್ತರ ಮೇಲೆ ದಾಳಿ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ.

ಪ್ಯಾರಿಸ್ ಮೂಲದ ಆರ್ ಎಸ್ ಎಫ್ ಅಥವಾ ರಿಪೋರ್ಟರ್ಸ್ ವಿಥೌಟು ಬಾರ್ಡರ್ಸ್  ಸ್ವಯಂ ಸೇವಾ ಸಂಸ್ಥೆಗಳು  ವಿಶ್ವದಾದ್ಯಂತ ಪತ್ರಕರ್ತರ ಮೇಲಿನ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಭಾರತದಲ್ಲಿ ಹಿಂದುತ್ವ ವಿರೋಧಿಸಿ ಬರೆಯುವ ಅಥವಾ ಮಾತನಾಡುವ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಂಘಟಿತ ದ್ವೇಷ ಅಭಿಯಾನಗಳು ನಡೆಯುತ್ತಿವೆ ಮಹಿಳೆಯರನ್ನೇ ಗುರಿಯಾಗಿಸಿಕೊಂಡ ಅಭಿಯಾನಗಳು ಕಂಡುಬರುತ್ತಿವೆ.#ಮಿಟೂ ಅಭಿಯಾನದಲ್ಲಿ ಮಹಿಳಾ ಪತ್ರಕರ್ತರ ಮೇಲಿನ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳು ಹೊರಹೊಮ್ಮಿವೆ ಎಂದು  ವರದಿಯಲ್ಲಿ ತಿಳಿಸಲಾಗಿದೆ.
SCROLL FOR NEXT