ವಿದೇಶ

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ: ಐವರು ಭಾರತೀಯರು ಸೇರಿ 290 ಸಾವು, 500 ಜನರಿಗೆ ಗಾಯ

Raghavendra Adiga
ಕೊಲಂಬೋ: ಶ್ರೀಲಂಕಾದಲ್ಲಿನ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಐವರು ಭಾರತೀಯರು ಸೇರಿ 290 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಸುಮಾರು 500  ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ತಿಳಿಸಿದ್ದಾರೆ.
ಲಂಕಾದ ತಮ್ಮ ಸಹವರ್ತಿಗಳ ಜತೆ ಮಾತನಾಡಿದ ನಂತರ ಸುಷ್ಮಾ ಸ್ವರಾಜ್ ತಾವು ಸರಣಿ ಟ್ವೀಟ್ ಮೂಲಕ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.ಶ್ರೀಲಂಕಾದ ನ್ಯಾಷನಲ್ ಹಾಸ್ಪಿಟಲ್ ಜತೆ ಭಾರತ ಹೈಕಮಿಷನರ್ ಕಛೇರಿ ಸಂಪರ್ಕಿಸಿದೆ. ಬಾಂಬ್ ಸ್ಪೋಟದಲ್ಲಿ ಮೂವರು ಭಾರತೀಯರು ಸಾವಿಗೀಡಾಗಿದ್ದು ಖಚಿತವಾಗಿದ್ದು ಮೃತರನ್ನು ಲಕ್ಷ್ಮಿ, ನಾರಾಯಣ್ ಚಂದ್ರಶೇಖರ್ ಮತ್ತು ರಮೇಶ್  ಎಂದು ಗುರುತಿಸಲಾಗಿದೆ ಎಂದು ಅವರು ಬರೆದಿದ್ದಾರೆ.
ಈ ಬೆಳಿಗ್ಗೆ, ಕೊಲಂಬೊದಲ್ಲಿನ ಭಾರತೀಯ ಹೈಕಮಿಷನ್ಟ್ಇಟ್ ಮಾಡಿದ್ದು ಇನ್ನೂ ಇಬ್ಬರು ಭಾರತೀಯರಾದ ಕೆ ಜಿ ಹನುಮಂತರಾಯಪ್ಪ ಹಾಗೂ ಎಂ. ರಂಗಪ್ಪ ಸಹ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ ಎಂದು ಖಚಿತಪಡಿಸಿದೆ.
ಇದಲ್ಲದೆ ಮಂಗಳೂರು ಮೂಲದವರಾದ ಪಿಎಸ್ ರಝೀನಾ(58) ಸಹ ಈ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾನುವಾರ, ಈಸ್ಟರ್ ಸಂಡೇ ದಿನ ಶ್ರೀಲಂಕಾದ ನಾನಾ ಭಾಗಗಳೈಇ ಮೂರು ಚರ್ಚ್ ಹಾಗೂ ಮೂರು ಪಂಚತಾರಾ ರೆಸ್ಟೋರೆಂಟ್ ಗಳ ಮೇಲೆ ಉಗ್ರ ದಾಳಿ ನಡೆಇದ್ತ್ತು. 
SCROLL FOR NEXT