ವಿದೇಶ

ಶ್ರೀಲಂಕಾ ಸ್ಫೋಟ: ಜಿಹಾದಿ ಸಂಘಟನೆ ಬಗ್ಗೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿದ್ದ ಸ್ಥಳೀಯ ಮುಸ್ಲಿಮರು!

Srinivas Rao BV
ಕೊಲಂಬೋ: ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಸ್ಥಳೀಯ ಇಸ್ಲಾಮಿಕ್ ಜಿಹಾದಿ ಸಂಘಟನೆಯೇ  ಕಾರಣ ಎಂದು ಲಂಕಾ ಸರ್ಕಾರ ಹೇಳಿದೆ. ಈ ಜಿಹಾದಿ ಸಂಘಟನೆ ಬೆಳವಣಿಗೆ ಬಗ್ಗೆ ಇಲ್ಲಿನ ಸ್ಥಳೀಯರು ಗುಪ್ತಚರ ಇಲಾಖೆಗೆ ಮೊದಲೇ ಎಚ್ಚರಿಕೆ ನೀಡಿದ್ದರು ಎಂಬುದು ಘಟನೆಗೆ ಸಂಬಂಧಿಸಿದ ತಾಜಾ ಮಾಹಿತಿ.   
ಈಸ್ಟರ್ ಭಾನುವಾರದ ದಿನ ಚರ್ಚ್ ಹಾಗೂ ಇನ್ನಿತರ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಿ ಸುಮಾರು 300 ಜನರನ್ನು ಹತ್ಯೆ ಮಾಡಿದ್ದು ಲಂಕಾದ ನ್ಯಾಷನಲ್ ಥೌಹೀದ್ ಜಮಾತ್ ಉಗ್ರ ಸಂಘಟನೆ. ಈ ಜಿಹಾದಿ ಉಗ್ರ ಸಂಘಟನೆ ಹಾಗೂ ಅದರ ಮುಖ್ಯಸ್ಥರ ಬಗ್ಗೆ ಶ್ರೀಲಂಕಾದ ಮುಸ್ಲಿಂ ಕೌನ್ಸಿಲ್ ನ ಉಪಾಧ್ಯಕ್ಷ ಹಿಲ್ಮಿ ಅಹ್ಮದ್ ಸೇನಾ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ  3 ವರ್ಷಗಳ ಹಿಂದೆಯೇ ಮಾಹಿತಿ ನೀಡಿ ಎಚ್ಚರಿಸಿದ್ದರು. 
"ಥೌಹೀದ್ ಜಮಾತ್ ಉಗ್ರ ಸಂಘಟನೆ ಮುಸ್ಲಿಮೇತರ ಸಮುದಾಯಗಳನ್ನು ಟಾರ್ಗೆಟ್ ಮಾಡುವುದನ್ನು ಉತ್ತೇಜಿಸುತ್ತದೆ. ಧರ್ಮದ ಹೆಸರಿನಲ್ಲಿ ಅವರನ್ನು ಹತ್ಯೆ ಮಾಡಬೇಕು ಎಂದು ಆ ಸಂಘಟನೆಯಲ್ಲಿರುವವರು ಹೇಳುತ್ತಾರೆ" ಎಂದು ಅಹ್ಮದ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮೂರು ವರ್ಷಗಳ ಹಿಂದೆ ಈ ಸಂಘಟನೆ ಬಗ್ಗೆ ಎಲ್ಲಾ ದಾಖಲೆಗಳನ್ನೂ ತಾವೇ ಖುದ್ಧಾಗಿ ಹೋಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ್ದೆ.  ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
SCROLL FOR NEXT