ವಿದೇಶ

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ: ಮನೆಯವರ ಅನುಮತಿ ಇಲ್ಲದೇ ಪ್ರಯಾಣಕ್ಕೆ ಅಸ್ತು!

Srinivas Rao BV
ರಿಯಾಧ್: ಸೌದಿ ಅರೇಬಿಯಾ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಮುಂದಾಗಿದ್ದು, ವಯಸ್ಕ ಹೆಣ್ಣುಮಕ್ಕಳು ಪ್ರಯಾಣಿಸುವುದಕ್ಕೆ ಅನುಮತಿ ನೀಡಲಾಗಿದೆ. 
ರಾಷ್ಟ್ರದಲ್ಲಿರುವ ಪುರುಷ ಪ್ರಾಧಾನ್ಯತೆಗೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಕುಟುಂಬ ವಿಷಯಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದಕ್ಕೆ ಸೌದಿ ಅರೇಬಿಯಾ ಈಗ ಮುಂದಾಗಿದೆ. 
ಅಲ್ಲಿನ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದರ ಬಗ್ಗೆ ಅಧಿಕೃತ ಗೆಜೆಟ್ ಪ್ರಕಟಿಸಿದ್ದು, ರಾಷ್ಟ್ರದ 21 ರ ವಯಸ್ಸಿನ ಯಾವುದೇ ವ್ಯಕ್ತಿಯೂ ಪಾಸ್ಪೋರ್ಟ್ ಪಡೆಯುವುದಕ್ಕೆ ಅರ್ಹನಾಗಿದ್ದು, ಪ್ರಯಾಣಿಸುವುದಕ್ಕೆ ಯಾರ ಅನುಮತಿಯೂ ಬೇಕಿಲ್ಲ ಎಂದು ಹೇಳಿದೆ. 
ಇದೇ ಮೊದಲ ಬಾರಿಗೆ ಕುಟುಂಬದ ಮಹಿಳೆಯರಿಗೆ ಮಕ್ಕಳ ಜನನ ನೋಂದಣಿ, ವಿವಾಹ, ವಿಚ್ಛೇದನ ಹಾಗೂ ಕುಟುಂಬಕ್ಕೆ ಸಂಬಂಧಪಟ್ಟ ದಾಖಲೆಗಳಿಗೆ ನೋಂದಣಿ ಮಾಡಿಸುವ ಹಕ್ಕನ್ನೂ ನೀಡಲಾಗಿದೆ. 
SCROLL FOR NEXT