ವಿದೇಶ

ಟೆಕ್ಸಾಸ್ ನಲ್ಲಿ ಗುಂಡಿನ ದಾಳಿ: 20 ಸಾವು, 26 ಕ್ಕೂ ಹೆಚ್ಚು ಜನರಿಗೆ ಗಾಯ!

Srinivas Rao BV
ಟೆಕ್ಸಾಸ್: ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದ್ದು, 20 ಜನರು ಸಾವನ್ನಪ್ಪಿದ್ದು, 26 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಟೆಕ್ಸಾಸ್ ನ ಜನನಿಬಿಡ ಶಾಪಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ದ್ವೇಷದಿಂದ ನಡೆದಿರುವ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. 
ಗುಂಡಿನ ದಾಳಿ ನಡೆಸಿರುವ ಗನ್ ಮ್ಯಾನ್ ನ್ನು 21 ವರ್ಷದ ಪ್ಯಾಟ್ರಿಕ್ ಕ್ರೂಸಿಯಸ್ ಎಂದು ಗುರುತಿಸಲಾಗಿದೆ. 
ಎಲ್ ಪಾಸೊ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಕೃತ್ಯ ಎಸಗಿರುವ ವ್ಯಕ್ತಿ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದು, ಈ ಘಟನೆಗೂ ಫೇಸ್ ಬುಕ್ ಪೋಸ್ಟ್ ಗೂ ಸಂಬಂಧವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 26 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 
SCROLL FOR NEXT