ಚೀನಾದಲ್ಲಿ ವಿದೇಶಾಂಗ ಸಚಿವ ಎಸ್.ಜೈ ಶಂಕರ್ 
ವಿದೇಶ

ಕ್ರೀಡೆ, ಸಂಸ್ಕೃತಿ ಮತ್ತು ಪಾರಂಪರಿಕ ಔಷಧ ವಲಯದಲ್ಲಿ ಭಾರತ–ಚೀನಾ ಸಹಿ

ಕ್ರೀಡೆ, ಸಂಸ್ಕೃತಿ ಮತ್ತು ಪಾರಂಪರಿಕ ಔಷಧ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಸೋಮವಾರ ಸಹಿ ಹಾಕಿವೆ.

ಬೀಜಿಂಗ್: ಕ್ರೀಡೆ, ಸಂಸ್ಕೃತಿ ಮತ್ತು ಪಾರಂಪರಿಕ ಔಷಧ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಸೋಮವಾರ ಸಹಿ ಹಾಕಿವೆ. ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರ ಮೂರು ದಿನಗಳ ಚೀನಾ ಭೇಟಿ ಸಂದರ್ಭದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಹಕಾರ 2020 ರ ಅನುಷ್ಠಾನ ಸಂಬಂಧ ಒಪ್ಪಂದದಲ್ಲಿ ಮಾರ್ಗಸೂಚಿಗಳಿವೆ. ಈ ಒಪ್ಪಂದಕ್ಕೆ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಸಹಿ ಹಾಕಿದ್ದಾರೆ. ಚೀನಾ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದೊಂದಿಗೆ ಕ್ರೀಡಾ ಸಹಕಾರ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತದ ಕ್ರೀಡಾ ಕಾರ್ಯದರ್ಶಿ ರಾಥೇ ಶ್ಯಾಮ್ ಜುಲಾನಿಯಾ ಮತ್ತು ಚೀನಾದ ಕ್ರೀಡಾ ಆಡಳಿತದ ಉಪ ಮಹಾನಿರ್ದೇಶಕ ಗಾವೋ ಜಿ಼ದಾನ್  ಸಹಿ ಹಾಕಿದ್ದಾರೆ.

ಚೀನಾದ ಭಾರತ ರಾಯಭಾರಿ ವಿಕ್ರಂ ಮಿಸ್ರಿ ಸಾಂಸ್ಕೃತಿ ವಿನಿಮಯ ಮತ್ತು ಪಾರಂಪರಿ ಔಷಧ ಸಂಬಂಧ ಎರಡು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. ಚೀನಾ ವಿದೇಶಾಂಗ ಸಚಿವರೊಂದಿಗಿನ ಚರ್ಚೆ ಬಳಿಕ ಮಾತನಾಡಿದ ಜೈಶಂಕರ್, ಉಭಯ ದೇಶಗಳ ನಡುವೆ ಫಲಪ್ರದ ಮಾತುಕತೆ ನಡೆದಿದ್ದು ಬಾಂಧವ್ಯ ವೃದ್ಧಿ ಸಂಬಂಧ ಹೊಸ ಮಾರ್ಗಗಳ ಬಗೆಗೆ ಚರ್ಚಿಸಲಾಯಿತು ಎಂದರು. 

ಭಾರತ; ಚೀನಾ ಸಾಂಸ್ಕೃತಿಕ ವಿನಿಮಯ ಕುರಿತ ಉನ್ನತ ಮಟ್ಟದ ವ್ಯವಸ್ಥೆಯ ಎರಡನೇ ಸಭೆಯ ಸಹ ಅಧ್ಯಕ್ಷತೆ ವಹಿಸಲು ಡಾ. ಜೈಶಂಕರ್ ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಈ ವರ್ಷದ ಮುಂಬರುವ ಉನ್ನತ ಮಟ್ಟದ ಭೇಟಿ, ಉಭಯ ರಾಷ್ಟ್ರಗಳ ಹಿತಾಸಕ್ತಿಯ ಇತರೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಜೈಶಂಕರ್ ಚರ್ಚೆ ನಡೆಸಲಿದ್ದಾರೆ ಎಂದು ಅವರ ಭೇಟಿ ಮುನ್ನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT