ವಿದೇಶ

ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ ಅಮೆರಿಕ ಸರಕು ಖರೀದಿಗೆ ಚೀನಾ ಸಮ್ಮತಿ

Srinivasamurthy VN

ವಾಷಿಂಗ್ಟನ್: ಅಮೆರಿಕದಿಂದ ಖರೀದಿ ಹೆಚ್ಚಿಸಲು ಸಮ್ಮತಿಸಿರುವ ಚೀನಾ ಮುಂದಿನ ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ ಮೌಲ್ಯದಷ್ಟು ವಸ್ತುಗಳನ್ನು ಖರೀದಿಸುವುದಾಗಿ ಹೇಳಿದೆ.
   
ಎರಡೂ ದೇಶಗಳ ನಡುವಿನ ಹೊಸ ಭಾಗಶಃ ಒಪ್ಪಂದದಡಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಯಾರಿಕಾ ಸರಕುಗಳು, ಕೃಷಿ ಉತ್ಪನ್ನ, ಇಂಧನ ಉತ್ಪನ್ನ ಮತ್ತು ಸೇವೆಗಳ ಖರೀದಿ ಪ್ರಮಾಣವನ್ನು ಕನಿಷ್ಠ 200 ಶತಕೋಟಿ ಡಾಲರ್ ಗೆ ಹೆಚ್ಚಿಸಲು ಚೀನಾ ಬದ್ಧವಾಗಿದೆ ಎಂದು ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಕೃಷಿ ವಲಯದಲ್ಲಿ ಚೀನಾ ಹೆಚ್ಚು ಖರೀದಿಸುವ ನಿರೀಕ್ಷೆ ಇದ್ದು ಮುಂದಿನ ಎರಡು ವರ್ಷಗಳಲ್ಲಿ ಸರಾಸರಿ 40 ರಿಂದ 50 ಶತಕೋಟಿ ಡಾಲರ್ ನಷ್ಟು ಖರೀದಿ ಮಾಡುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಹಂತದ ವ್ಯಾಪಾರ ಒಪ್ಪಂದಕ್ಕೆ ಜನವರಿ ಪ್ರಾರಂಭದಲ್ಲಿ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಅಮೆರಿಕ – ಚೀನಾ ಘೋಷಣೆ ಮಾಡಿತ್ತು

SCROLL FOR NEXT