ವಿದೇಶ

ಭಾರತದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪಾಕ್ ಸಂಸತ್ತಿನಲ್ಲಿ ನಿರ್ಣಯ

Manjula VN

ಇಸ್ಲಾಮಾಬಾದ್: ಭಾರತದ ಆಂತರಿಕ ವಿಚಾರದಲ್ಲಿ ಪದೇ ಪದೇ ಮೂಗು ತೂರಿಸುವುದನ್ನು ಮುಂದುವರೆಸಿರುವ ಪಾಕಿಸ್ತಾನ ಈ ಬಾರಿ ಭಾರತದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ತನ್ನ ಸಂಸತ್ತಿನಲ್ಲಿ ನಿರ್ಣಯಗೊಂಡಿದೆ. 

ಪೌರತ್ವ ತಿದ್ದುಪಡಿ ಕಾಯ್ದೆ ದ್ವಿಪಕ್ಷೀಯ ಒಪ್ಪಂದಗಳಿಗೆ ವಿರುದ್ಧವಾಗಿದ್ದು, ಕಾಯ್ದೆಯಲ್ಲಿರುವ ತಾರತಮ್ಯದ ಷರತ್ತುಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದೆ. 

ಪಾಕಿಸ್ತಾನ ಶಿಕ್ಷಣ ಸಚಿವ ಶಫ್ಖತ್ ಮಹಮ್ದೂದ್ ಅವರು ನಿರ್ಣಯವನ್ನು ಮಂಡನೆ ಮಾಡಿದ್ದು, ಕಾಯ್ದೆಯು ಸಮಾತನೆ ಮತ್ತು ತಾರತಮ್ಯದಿಂದ ಕೂಡಿದ್ದು, ಅಂತರಾಷ್ಟ್ರೀಯ ಮಾನದಂಡಗಳು ಮತ್ತು ಅಂತರಾಷ್ಟ್ರೀ ಮಾನವ ಹಕ್ಕುಗಳ ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. 

ತಿದ್ದುಪಡಿ ಕಾಯ್ದೆಯು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಗ್ರಹಿಕೆಗಳ ವಿರುದ್ಧವಾಗಿದೆ. ಪ್ರಮುಖವಾಗಿ ಆಯಾ ದೇಶಗಳಲ್ಲಿನ ಅಲ್ಪಸಂಖ್ಯಾತರ ಭದ್ರತೆ ಹಾಗೂ ಹಕ್ಕುಗಳ ಕುರಿತದ್ದಾಗಿದೆ ಎಂದು ತಿಳಿಸಿದ್ದಾರೆ. 

ಭಾರತದ ನೆರೆಯ ರಾಷ್ಟ್ರಗಳಿಂದ ಅಂದರೆ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಹಂದಿರುವ 6 ಧಾರ್ಮಿಕ  ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಮಸೂದೆಯೇ ಪೌರತ್ವ ತಿದ್ದುಪಡಿ ಮಸೂದೆ-2019. 

SCROLL FOR NEXT