ವಿದೇಶ

ಗಡಿಪಾರು ಆದೇಶದ ವಿರುದ್ಧ ಕೋರ್ಟ್ ಗೆ ಮೇಲ್ಮನವಿ: ವಿಜಯ್ ಮಲ್ಯ

Sumana Upadhyaya

ಲಂಡನ್: ಭಾರತಕ್ಕೆ ಹಸ್ತಾಂತರ ಮಾಡಲು ಲಂಡನ್ ಸರ್ಕಾರ ಒಪ್ಪಿಗೆ ನೀಡಿದ ಕೆಲವೇ ಗಂಟೆಗ ಬಳಿಕ ಪ್ರತಿಕ್ರಿಯೆ ನೀಡಿರುವ ವಿಜಯ್ ಮಲ್ಯ ಗಡಿಪಾರಿನ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸ್ವತಃ ವಿಜಯ್ ಮಲ್ಯ ಅವರೇ ಘೋಷಿಸಿಕೊಂಡಿದ್ದು ಕಳೆದ ವರ್ಷ ಡಿಸೆಂಬರ್ 10ರಂದು ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನಾನು ಬ್ಯಾಂಕಿನಿಂದ ಪಡೆದಿರುವ ಎಲ್ಲಾ ಸಾಲವನ್ನು ಹಿಂತಿರುಗಿಸಲು ಸಿದ್ದವಿರುವುದಾಗಿ ತಿಳಿಸಿದ್ದೆ. ಆದರೆ ಸರ್ಕಾರದ ಗೃಹ ಕಾರ್ಯದರ್ಶಿಗಳು ನಿರ್ಧಾರ ತೆಗೆದುಕೊಳ್ಳುವ ಮೊದಲು ಅದು ಸಾಧ್ಯವಿರಲಿಲ್ಲ. ಇದೀಗ ಯುಕೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದಿದ್ದಾರೆ.

ಬ್ಯಾಂಕ್ ವಂಚನೆ ಸಂಬಂಧ ವಿಚಾರಣೆ ಎದುರಿಸಲು ಭಾರತಕ್ಕೆ ಹಸ್ತಾಂತರದ ಪರವಾಗಿ ಲಂಡನ್ ನ್ಯಾಯಾಲಯವು ತೀರ್ಪುನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಆದರೆ ಮಲ್ಯ ಈ ಸಂಬಂಧ 14 ದಿನಗಳೊಳಗೆ ಭಾರತಕ್ಕೆ ಗಡಿಪಾರು ಆಗುವುದರ ಕುರಿತಂತೆ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಭಾರತಕ್ಕೆ ಇಂಗ್ಲೆಂಡಿನಿಂದ ಗಡಿಪಾರು ಮಾಡುವ ವಿಧಾನ ಪ್ರಕಾರ, ಮಲ್ಯ ಅವರ ಗಡಿಪಾರಿಗೆ ಆದೇಶ ನೀಡಲು ಅಧಿಕೃತ ಅಧಿಕಾರ ಹೊಂದಿರುವ ಲಂಡನ್ ನ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರಿಗೆ ಅಲ್ಲಿನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಕಿಂಗ್ ಫಿಶರ್ ಏರ್ ಲೈನ್ಸ್ ಉದ್ಯಮ ನಷ್ಟವಾದ ನಂತರ ಬ್ಯಾಂಕಿಗೆ 9 ಸಾವಿರ ಕೋಟಿ ರೂಪಾಯಿಗಳಷ್ಟು ವಿಜಯ್ ಮಲ್ಯ ವಂಚಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಕೇಸನ್ನು ದಾಖಲಿಸಿದ ನಂತರ ವಿಜಯ್ ಮಲ್ಯ ಲಂಡನ್ ಗೆ ಪರಾರಿಯಾಗಿದ್ದರು. 2017ರ ಏಪ್ರಿಲ್ ನಲ್ಲಿ ಸ್ಕಾಟ್ ಲ್ಯಾಂಡ್ ಯಾರ್ಡ್ ನ್ಯಾಯಾಲಯ ಮಲ್ಯ ಅವರ ಗಡಿಪಾರಿಗೆ ಆದೇಶಿಸಿತ್ತು. ಆದರೆ ಇದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಮಲ್ಯಗೆ ಜಾಮೀನು ಸಿಕ್ಕಿತ್ತು.

SCROLL FOR NEXT