ವಿದೇಶ

ನನ್ನಿಂದ ಹಣ ವಾಪಸ್ ಪಡೆಯುವಂತೆ ಪ್ರಧಾನಿ ಮೋದಿ ಏಕೆ ಬ್ಯಾಂಕುಗಳಿಗೆ ಹೇಳುತ್ತಿಲ್ಲ: ವಿಜಯ್ ಮಲ್ಯ ಪ್ರಶ್ನೆ

Sumana Upadhyaya

ಲಂಡನ್: ಪ್ರಧಾನಿ ನರೇಂದ್ರ ಮೋದಿಯವರನ್ನು ನಿರರ್ಗಳ ಮಾತುಗಾರ ಎಂದು ಶ್ಲಾಘಿಸಿದ ಮದ್ಯ ಉದ್ಯಮಿ ವಿಜಯ್ ಮಲ್ಯ, ಸಾರ್ವಜನಿಕರಿಗೆ ತಾವು ನೀಡಬೇಕಾಗಿರುವ ಹಣವನ್ನು ನೀಡಲು ತಾವು ಮುಂದೆ ಬಂದಿದ್ದರೂ ಕೂಡ ಹಣ ಪಡೆಯಲು ಅವರು ಸೂಚಿಸುವುದಿಲ್ಲವೇಕೆ ಎಂದು ಕೇಳಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, ಕಳೆದ ಬಾರಿ ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರು ಮಾಡಿದ ಭಾಷಣ ನನ್ನ ಗಮನ ಸೆಳೆಯಿತು. ಅವರು ಖಂಡಿತವಾಗಿಯೂ ಉತ್ತಮ ಮಾತುಗಾರ. 9 ಸಾವಿರ ಕೋಟಿ ರೂಪಾಯಿ ಪಡೆದುಕೊಂಡು ಒಬ್ಬರು ಓಡಿಹೋಗಿದ್ದಾರೆ ಎಂದು ಹೆಸರನ್ನು ಹೇಳದೆ ಪ್ರಸ್ತಾಪಿಸಿದರು. ಮಾಧ್ಯಮಗಳು ಮಾಡಿರುವ ವಿಶ್ಲೇಷಣೆ ಪ್ರಕಾರ ಪ್ರಧಾನಿಯವರು ನನ್ನನ್ನು ಉಲ್ಲೇಖಿಸಿ ಹೇಳಿದ್ದಾಗಿತ್ತು.

ನಾನು ಈ ಹಿಂದೆ ಮಾಡಿರುವ ಟ್ವೀಟ್ ಗಳಿಗೆ ಅನುಗುಣವಾಗಿ, ನಾನು ಕೊಡಲು ಮುಂದೆ ಬಂದಿರುವ ಹಣವನ್ನು ಪಡೆಯಲು ಬ್ಯಾಂಕುಗಳಿಗೆ ಪ್ರಧಾನಿಯವರು ಆದೇಶ ನೀಡುವುದಿಲ್ಲವೇಕೆ ಎಂದು ನಾನು ಕೇಳುತ್ತೇನೆ. ನನ್ನಿಂದ ಹಣ ತೆಗೆದುಕೊಂಡರೆ ಕಿಂಗ್ ಫಿಶರ್ ನಲ್ಲಿ ಹಾಕಿದ ಹಣವನ್ನು ಸಾರ್ವಜನಿಕರು ಪಡೆಯಬಹುದಲ್ಲವೇ ಎಂದು ವಿಜಯ್ ಮಲ್ಯ ಸರಣಿ ಟ್ವೀಟ್ ಗಳ ಮೂಲಕ ಪ್ರಶ್ನಿಸಿದ್ದಾರೆ.

ಹಣಕಾಸಿಗೆ ಸಂಬಂಧಿಸಿದ ವಿವಾದವನ್ನು ಕರ್ನಾಟಕ ಹೈಕೋರ್ಟ್ ಮುಂದೆ ಬಗೆಹರಿಸಿಕೊಳ್ಳಲು ತಾನು ಅವಕಾಶ ನೀಡಿದ್ದೆ ಎಂದು ಕೂಡ ವಿಜಯ್ ಮಲ್ಯ ಹೇಳಿದ್ದಾರೆ.

SCROLL FOR NEXT