ಸೌದಿ ಯುವರಾಜನಿಗೆ ಚಿನ್ನ ಲೇಪಿತ ಗನ್ ಉಡುಗೊರೆ ನೀಡಿದ ಪಾಕ್
ಪಾಕಿಸ್ತಾನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಾಗತಿಕವಾಗಿ ತೀವ್ರ ಒತ್ತಡಕ್ಕೆ ಸಿಲುಕಿರುವ ಸಂದರ್ಭದಲ್ಲೇ ಸೌದಿ ಅರೇಬಿಯಾದ ಯುವರಾಜ್ ಮುಹಮ್ಮದ್ ಬಿನ್....
ಕರಾಚಿ: ಪಾಕಿಸ್ತಾನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಾಗತಿಕವಾಗಿ ತೀವ್ರ ಒತ್ತಡಕ್ಕೆ ಸಿಲುಕಿರುವ ಸಂದರ್ಭದಲ್ಲೇ ಸೌದಿ ಅರೇಬಿಯಾದ ಯುವರಾಜ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಚಿನ್ನ ಲೇಪಿತ ಸಬ್ ಮೆಷಿನ್ ಗನ್ ಅನ್ನು ಉಡುಗೊರೆಯಾಗಿ ನೀಡಿದ್ದು, ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ನಮ್ಮ ದೇಶಕ್ಕೆ ಅತಿಥಿಗಳು ಬಂದಾಗ ವಿಶೇಷವಾದ ಉಡುಗೊರೆಯನ್ನು ನೀಡಿ ಬೀಳ್ಕೊಡುವುದು ಸಂಪ್ರದಾಯ. ನೆರೆಯ ಪಾಕಿಸ್ತಾನ ಸಹ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ. ಆದರೆ, ಇತ್ತೀಚಿಗೆ ಪಾಕ್ ಭೇಟಿ ನೀಡಿದ್ದ ಸೌದಿ ಯುವರಾಜನಿಗೆ ನೀಡಿರುವ ಉಡುಗೊರೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಶಸ್ತ್ರಾಸ್ತ್ರ ಉಡುಗೊರೆ ಸ್ವೀಕರಿಸುವ ವಿಚಾರದಲ್ಲಿ ಕೆಲವು ಶಿಷ್ಟಾಚಾರಗಳಿರುತ್ತವೆ. ಆದರೆ ಸೌದಿ ಯುವರಾಜ ಯಾವುದೇ ಶಿಷ್ಟಾಚಾರ ಪಾಲಿಸದೆ ಯಾವುದೇ ಸಂಕೋಚವಿಲ್ಲದೆ ಚಿನ್ನ ಲೇಪಿತ ಸಬ್ ಮಷಿನ್ ಗನ್ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ.
ಜರ್ಮನ್ ಇಂಜಿನಿಯರ್ ಗಳು ಈ ಬಂದೂಕನ್ನು ತಯಾರಿಸಿದ್ದು, ಚಿನ್ನದ ಲೇಪನದೊಂದಿಗೆ ಮಾಡಿಫೈ ಮಾಡಲಾಗಿದೆ.
ಸೌದಿ ಯುವರಾಜನಿಗೆ ಬಂದೂಕನ್ನು ಉಡುಗೊರೆಯಾಗಿ ನೀಡಿರುವ ಪಾಕಿಸ್ತಾನದ ವರ್ತನೆ ತೀವ್ರ ಟೀಕೆ ಸಹ ವ್ಯಕ್ತವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.