ಪುಲ್ವಾಮಾ ಉಗ್ರರ ದಾಳಿ: ಹುತಾತ್ಮ ಯೋಧರ ಕುಟುಂಬಕ್ಕೆ ಭಾರತೀಯ ಮೂಲದ ದುಬೈ ಉದ್ಯಮಿಗಳಿಂದ 1 ಕೋಟಿ ರು.
ಪುಲ್ವಾಮಾ ಉಗ್ರರ ದಾಳಿ ಪ್ರಕರಣದಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಗಳಿಗೆ ದುಬೈನಲ್ಲಿರುವ ಭಾರತೀಯ ಮೂಲದ ಇಬ್ಬರು ಸಹೋದರರು 1ಕೋಟಿ ರು ...
ದುಬೈ: ಪುಲ್ವಾಮಾ ಉಗ್ರರ ದಾಳಿ ಪ್ರಕರಣದಲ್ಲಿ ಹುತಾತ್ಮರಾದ 40 ಸೈನಿಕರ ಕುಟುಂಬಗಳಿಗೆ ದುಬೈನಲ್ಲಿರುವ ಭಾರತೀಯ ಮೂಲದ ಇಬ್ಬರು ಸಹೋದರರು 1ಕೋಟಿ ರು ಹಣ ನೀಡುವುದಾಗಿ ತಿಳಿಸಿದ್ದಾರೆ.
ಜೆಮಿನಿ ರಿಯಲ್ ಎಸ್ಟೇಟ್ ಗ್ರೂಪ್ ನ ಸುಧಾಕರ್ ರಾವ್ ಮತ್ತು ಪ್ರಭಾಕರ್ ರಾವ್ ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ರು ಧನ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. ಉದ್ಯಮಗಳ ಈ ಧನ ಸಹಾಯಕ್ಕೆ ಭಾರತೀಯ ರಾಯಭಾರಿ ಜನರಲ್ ವಿಪುಲ್ ಧನ್ಯವಾದ ಹೇಳಿದ್ದಾರೆ.
ನಮ್ಮ ರಕ್ಷಣೆಗಾಗಿ ಜೀವ ಒತ್ತೆ ಇಡುವ ಸೈನಿಕರಿಗಾಗಿ ನಾವು ಇಷ್ಟಾದರೂ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.