ಟೋಕಿಯೋ: ದ್ವೀಪ ರಾಷ್ಟ್ರ ಜಪಾನ್ ನಲ್ಲಿ ನಿನ್ನೆ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7ರಷ್ಟು ತೀವ್ರತೆ ದಾಖಲಾಗಿದೆ.
ಜಪಾನ್ ನ ಹೊಕ್ಕೈಯ್ಡೋ ದ್ವೀಪದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದ್ದು, ಕಡಲಾಳದ ಸುಮಾರು 41 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಭೂಕಂಪನ ಮಾಪನ ಇಲಾಖೆ ಅಧಿಕಾರಿಗಳು ಪ್ರಬಲ ಭೂಕಂಪನವೇ ಆಗಿದ್ದರೂ, ಭೂಮಿಯ ತೀರಾ ಆಳದಲ್ಲಿ ಸಂಭವಿಸಿರುವುದರಿಂದ ಸುನಾಮಿ ಅಲೆಗಳು ಏಳುವ ಸಾಧ್ಯತೆಗಳಿಲ್ಲ ಎಂದು ಹೇಳಿದ್ದಾರೆ.
ಇನ್ನು ಭೂಕಂಪನದಲ್ಲಿ ಸಾವು-ನೋವು, ಆಸ್ತಿ-ಪಾಸ್ತಿಗಳಿಗೆ ನಷ್ಟವಾದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಯೊಶಿಹೈಡ್ ಸುಗ ಅವರು ಭೂಕಂಪನದ ಕುರಿತು ಪರಿಸ್ಥಿತಿ ಅವಲೋಕಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಇದೇ ದ್ವೀಪದಲ್ಲಿ 6 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು. ಈ ವೇಳೆ ಹತ್ತಾರು ಕಟ್ಟಡಗಳು ನೆಲಕ್ಕುರುಳಿ ಸುಮಾರು 40 ಮಂದಿ ಸಾವಿಗೀಡಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics