ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಪಾಕಿಸ್ತಾನ ವಶದಲ್ಲಿನ ಭಾರತ ಪೈಲಟ್ ತಕ್ಷಣ ಬಿಡುಗಡೆಯಾಗಬೇಕು: ಪಾಕ್ ಮಾಜಿ ಪ್ರಧಾನಿ ಮೊಮ್ಮಗಳು ಫಾತಿಮಾ ಭುಟ್ಟೋ ಒತ್ತಾಯ

ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ತಕ್ಷಣ ಸುರಕ್ಷಿತವಾಗಿ ಹಿಂದೆ ಕಳಿಸಬೇಕು ಎಂದು ಪಾಕ್ ಮಾಜಿ ಪ್ರಧಾನಿ ಝಲ್ಲಿಕರ್ ಅಲಿ ಭುಟ್ಟೋ.....

ಫಾತಿಮಾ ಭುಟ್ಟೋ
Raghavendra Adiga
Updated On : 28 Feb 2019, 2:38 am
ವಾಷಿಂಗ್ಟನ್: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ತಕ್ಷಣ ಸುರಕ್ಷಿತವಾಗಿ ಹಿಂದೆ ಕಳಿಸಬೇಕು ಎಂದು ಪಾಕ್ ಮಾಜಿ ಪ್ರಧಾನಿ ಝಲ್ಲಿಕರ್ ಅಲಿ ಭುಟ್ಟೋ ಅವರ ಮೊಮ್ಮಗಳು, ಲೇಖಕಿ ಫಾತಿಮಾ ಭುಟ್ಟೋ ಒತ್ತಾಯಿಸಿದ್ದಾರೆ.
"ನಮ್ಮ ದೇಶ ಬಂಧಿಸಿರುವ ಭಾರತೀಯ ಪೈಲಟ್ ಅಭಿನಂದನ್ ನನ್ನು ಶಾಂತಿ, ಮಾನವೀಯತೆಗಿನ ಬದ್ದತೆ ಹಿನ್ನೆಲೆಯಲ್ಲಿ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ನಾನು ಹಾಗೂ ನನ್ನಂತಹಾ ಯುವ ಪಾಕಿಸ್ತಾನಿಗಳು ಆಗ್ರಹಿಸಿದ್ದೇವೆ" ಭುಟ್ಟೋ ಹೇಳಿದ್ದಾರೆ.
"ಈಗ ಯುದ್ಧದ ಸ್ಥಿತಿಯಲ್ಲಿ ಣಾವು ಇದ್ದೇವೆ, ಪಾಕಿಸ್ತಾನ ಸೈನಿಕರು ಸಾಯುವುದಕ್ಕೆ ನಾವು ಬಯಸುಉವುದಿಲ್ಲ. ಭಾರತೀಯ ಸೈನ್ನ್ಯದವರೂ ಸಹ ಸಾಯಬಾರದು. " ಬೆನಝೀರ್ ಭುಟ್ಟೋ ಸೊಸೆ ಫಾತಿಮಾ ಹೇಳಿದ್ದಾರೆ.

Advertisement

Advertisement

"ನಮ್ಮ ಪೀಳಿಗೆಯ ಪಾಕ್ ಯುವಕರು ಮಾತನಾಡುವ ಹಕ್ಕಿಗಾಗಿ ಹೋರಾಡಿದ್ದೆವು. ಈಗ ಶಾಂತಿಗಾಗಿ ದನಿ ಎತ್ತಲು ಹೆದರಲ್ಲ. ಪಾಕಿಸ್ತಾನದ ಇತ್ತೀಚಿನ ಇತಿಹಾಸ ರಕ್ತಸಿಕ್ತವಾಗಿದ್ದು ಇದರಿಂದ ನಮ್ಮ ದೇಶದ ಸ್ವಂತ ನಾಗರಿಕರು ಹೆಚು ತೊಂದರೆಗೆ ಒಳಗಾಗಿದ್ದಾರೆ. ಮಿಲಿಟರಿ ಆಳ್ವಿಕೆ, ಅನಿಶ್ಚಿತತೆ, ಭಯೋತ್ಪಾದನೆ ಅನುಭವವಿರುವ ನಮ್ಮ ಪೀಳಿಗೆ ಯಾವ ಕಾರಣಕ್ಕೆ ಸಹ ಯುದ್ಧವನ್ನು ಬಯಸುವುದಿಲ್ಲ. ಸಂಘರ್ಷದ ಸ್ಥಿತಿ ಇಷ್ಟಪಡುವುದಿಲ್ಲ" ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments