ಎಫ್ 16 ವಿಮಾನ 
ವಿದೇಶ

ಪಾಕ್ ಎಡವಟ್ಟು: ತಮ್ಮದೇ ವಿಮಾನದ ಪೈಲಟ್ ನನ್ನು ಭಾರತೀಯನೆಂದು ನಂಬಿ ಹಿಗ್ಗಾಮುಗ್ಗಾ ಥಳಿಸಿದ ಮಂದಿ!

ಪಾಕಿಸ್ತಾನ ಎಂತಹಾ ಎಡವಟ್ಟು ರಾಷ್ಟ್ರವೆನ್ನಲು ಈ ಒಂದು ಸುದ್ದಿ ತಾಜಾ ಉದಾಹರಣೆಯಾಗಿದೆ. ಪಾಕ್ ಯುದ್ಧ ವಿಮಾನ ಎಫ್ 16 ಭಾರತದ ವಾಯುಗಡಿಯೊಳಗೆ ನುಗ್ಗಿದ್ದಾಗ ಭಾರತೀಯ ಪಡೆ....

ಇಸ್ಲಾಮಾಬಾದ್: ಪಾಕಿಸ್ತಾನ ಎಂತಹಾ ಎಡವಟ್ಟು ರಾಷ್ಟ್ರವೆನ್ನಲು ಈ ಒಂದು ಸುದ್ದಿ ತಾಜಾ ಉದಾಹರಣೆಯಾಗಿದೆ. ಪಾಕ್ ಯುದ್ಧ ವಿಮಾನ ಎಫ್ 16 ಭಾರತದ ವಾಯುಗಡಿಯೊಳಗೆ ನುಗ್ಗಿದ್ದಾಗ ಭಾರತೀಯ ಪಡೆ ಇದನ್ನು ಹೊಡೆದುರುಳಿಸಿದೆ. ಆ ವೇಳೆ ಎಫ್16 ನಲ್ಲಿದ್ದ ಪೈಲಟ್ ಪಾಕ್ ಗಡಿಯೊಳಗೆ ಪ್ಯಾರಾಚೂಟ್ ಬಳಸಿ ಇಳಿದಿದ್ದು ಆಗ ಅಲ್ಲಿನ ಸ್ಥಳೀಯರು ಆತ ಭಾರತೀಯನೆಂದೇ ಶಂಕಿಸಿ ಅವನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ!
ಆತ ಭಾರತೀಯನೆಂದು ಭಾವಿಸಿದ ಸ್ಥಳೀಯ ಪಾಕ್ ನಿವಾಸಿಗಳು ತಮ್ಮದೇ ಪೈಲಟ್ ಗೆ ಅರೆಜೀವವಾಗುವಂತೆ ಥಳಿಸಿದ ಘಟನೆ ಬುಧವಾರ ನಡೆದಿದೆ. ಬಾರತ ವಾಯುಪಡೆ ಪಾಕಿಸ್ತಾನದ ಎಫ್16 ಯುದ್ಧ ವಿಮಾನವನ್ನು ಪತನಗೊಳಿಸಿದ ಬೆನ್ನಲ್ಲಿ ಈ ಘಟನೆ ನಡೆದಿತ್ತು.
ಇನ್ನು ಇಲ್ಲಿನ ಸರ್ಕಾರ ಸಹ ಪ್ರಾರಂಭದಲ್ಲಿ ತಮ್ಮದೇ ಪೈಲಟ್ ಅನ್ನು ಭಾರತೀಯ ಎಂದೇ ಭಾವಿಸಿದೆ. ಅದೇ ಕಾರಣದಿಂದ ತಮ್ಮ ಬಳಿ ಇಬ್ಬರು ಭಾರತೀಯ ಪೈಲಟ್ ಗಳಿದ್ದಾರೆಂದು ಘೋಷಣೆ ಹೊರಡಿಸಿತ್ತು.  ಆದರೆ ಇಬರು ಭಾರತೀಯ ಪೈಲಟ್ ಗಳು ತಮ್ಮ ವಶದಲ್ಲಿದ್ದಾರೆ ಎಂದು ಘೋಷಿಸಿದ ಸ್ವಲ್ಪದರಲ್ಲೇ ಅದರಲ್ಲೊಬ್ಬ ತಮ್ಮದೇ ನಾಡಿನವ ಎನ್ನುವುದು ತಿಳಿದಿದೆ.
ಇದರಿಂದ ಮತ್ತೆ ಮುಜುಗರಕ್ಕೀಡಾದ ಪಾಕ್ ಸಂಜೆ ವೇಳೆಗೆ ತಮ್ಮ ವಶದಲ್ಲಿರುವುದು ಓರ್ವ ಭಾರತೀಯ ಪೈಲಟ್ ಮಾತ್ರ ಎಂದು ಹೇಳಿಕೆ ನೀಡಿತ್ತು.
ಸಧ್ಯ ನಿನ್ನೆ ನಡೆದ ವಾಯುದಾಳಿಯ ವೇಳೆ ಮಿಗ್ ವಿಮಾನವೊಂದು ಪತನವಾಗಿ ಅದರಲ್ಲಿನ ಪೈಲಟ್ ವಿಂಡ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕ್ ಸೇನೆ ವಶದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್