ಯುದ್ಧಕ್ಕೆ ಸಿದ್ಧರಾಗಿರಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ದಿಢೀರ್ ಆದೇಶ
ವಿನಃಕಾರಣ ಕಾಲು ಕೆರೆದುಕೊಂಡು ಭಾರತದ ಗಡಿ ಅತಿಕ್ರಮ ಪ್ರವೇಶಿಸುವ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಯುದ್ಧಕ್ಕೆ ಸಿದ್ಧರಾಗಿರೀ ಎಂದು ಆದೇಶಿಸಿದ್ದಾರೆ.
ಬೀಜಿಂಗ್: ವಿನಃಕಾರಣ ಕಾಲು ಕೆರೆದುಕೊಂಡು ಭಾರತದ ಗಡಿ ಅತಿಕ್ರಮ ಪ್ರವೇಶಿಸುವ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಯುದ್ಧಕ್ಕೆ ಸಿದ್ಧರಾಗಿರೀ ಎಂದು ಆದೇಶಿಸಿದ್ದಾರೆ.
ಚೀನಾ ಸೇನೆ ತನ್ನ ಸಾಮರ್ಥ್ಯವನ್ನು ಹೆಚ್ಚಿಕೊಳ್ಳುವುದಕ್ಕೆ ಹಾಗೂ ತುರ್ತು ಯುದ್ಧಕ್ಕಾಗಿ ಸೇನೆ ಯಾವಾಗಲೂ ತಯಾರಿರುವಂತೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆದೇಶಿಸಿದ್ದಾರೆ.
ಜಿನ್ಪಿಂಗ್ ತಮ್ಮ ಅಧೀನದಲ್ಲಿರುವ ಚೀನಾ ಸೇನೆಯ ಕಾರ್ಯತಂತ್ರ ಮತ್ತು ಯುದ್ಧತಂತ್ರದ ಯೋಜನೆಯನ್ನು ಹೆಚ್ಚಿಸಲು ಹಾಗೂ ಜಂಟಿ ಕಾರ್ಯಾಚರಣೆ ಸಾಮರ್ಥ್ಯ ಮತ್ತು ತುರ್ತು ಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಸಿದ್ಧತೆಗಳನ್ನು ಹೆಚ್ಚಿಸಲು ಸೇನೆಗೆ ಆದೇಶಿಸಲಾಗಿದೆ ಎಂದು ಸರ್ಕಾರಿ ಒಡೆತನದ ಚೀನಾ ಡೈಲಿ ನ್ಯೂಸ್ ಪೇಪರ್ ವರದಿ ಮಾಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.