ಬಂಧಿತ ಡ್ರಗ್ಸ್ ಕಳ್ಳ ಸಾಗಣೆದಾರ ಜೋಕ್ವಿನ್ ಚಾಪೊ 
ವಿದೇಶ

ಅಮೆರಿಕಕ್ಕೆ 155 ಟನ್ ಮಾದಕ ದ್ರವ್ಯ ಕಳ್ಳ ಸಾಗಣೆ ಮಾಡಿದ್ದ ಕುಖ್ಯಾತ ಸ್ಮಗ್ಲರ್, 1 ವರ್ಷದ ಮಗಳಿಗೆ ಕೊಟ್ಟಿದ್ದು ಎಕೆ 47 ಗಿಫ್ಟ್!

ಕೇವಲ ಗ್ರಾಂ ಲೆಕ್ಕದಲ್ಲಿ ಮಾದಕ ದ್ರವ್ಯ ದೊರತರೇ ಪೊಲೀಸರು ಒದ್ದು ಒಳಗೆ ಹಾಕುತ್ತಾರೆ.... ಅಂತಹುದರಲ್ಲಿ ಇಲ್ಲೊಬ್ಬ ಭೂಪ ಅಮೆರಿಕದಂತಹ ರಾಷ್ಟ್ರಕ್ಕೆ ಬರೊಬ್ಬರಿ 155 ಟನ್ ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

ವಾಷಿಂಗ್ಟನ್: ಕೇವಲ ಗ್ರಾಂ ಲೆಕ್ಕದಲ್ಲಿ ಮಾದಕ ದ್ರವ್ಯ ದೊರತರೇ ಪೊಲೀಸರು ಒದ್ದು ಒಳಗೆ ಹಾಕುತ್ತಾರೆ.... ಅಂತಹುದರಲ್ಲಿ ಇಲ್ಲೊಬ್ಬ ಭೂಪ ಅಮೆರಿಕದಂತಹ ರಾಷ್ಟ್ರಕ್ಕೆ ಬರೊಬ್ಬರಿ 155 ಟನ್ ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಹೌದು.. ಜೋಕ್ವಿನ್ ಚಾಪೊ ಎಂಬ ಮೆಕ್ಸಿಕೋ ಮೂಲದ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳ ಸಾಗಣೆದಾರ ಅಮೆರಿಕಕ್ಕೆ ಸುಮರು 155 ಟನ್ ಮಾದಕ ದ್ರವ್ಯ ಕಳ್ಳ ಸಾಗಣೆ ಮಾಡಿದ ಆರೋಪ ಎದುರಿಸುತ್ತಿದ್ದು, ಈ ಕುಖ್ಯಾತ ವ್ಯಕ್ತಿಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಮೆಕ್ಸಿಕನ್ ಡ್ರಗ್ ಲಾರ್ಡ್ ಎಂದೇ ಕರೆಯುವ ಈತನ ಬಂದನದೊಂದಿಗೆ ಅಮೆರಿಕದಲ್ಲಿ ಅತೀ ದೊಡ್ಡ ಡ್ರಗ್ಸ್ ಕಳ್ಳಸಾಗಣೆ ಕೊಂಡಿಯೊಂದು ಕಳಚಿ ಬಿದ್ದಂತಾಗಿದ್ದು,. ಈತನ ಬಂಧನ ಅಮೆರಿಕದಲ್ಲಿ ಭಾರಿ ಚರ್ಚೆಯನ್ನೇ ಹುಟ್ಟುಹಾಕಿದೆ.
ಇನ್ನು ಈತನನ್ನು ವಿಚಾರಣೆಗೆ ಒಳಪಡಿಸಿರುವ ತನಿಖಾಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳ ಲಭ್ಯವಾಗುತ್ತಿದ್ದು, ಪತ್ನಿ ಇರುವಾಗಲೇ ಈತ ಮತ್ತೋರ್ವ ಪ್ರೇಯಸಿಯೊಂದಿಗೆ  ಕಾಲ ಕಳೆಯುತ್ತಿದ್ದನಂತೆ. 61 ವರ್ಷದ ಜೋಕ್ವಿನ್ ಚಾಪೊ ತನಗಿಂತಲೂ ಸುಮಾರು 30 ವರ್ಷ ಚಿಕ್ಕವಳಾದ ಎಮ್ಮಾ ಕರೊನೆಲ್ ಳನ್ನು ವಿವಾಹವಾಗಿದ್ದ. ಎಮ್ಮಾ ಕರೊನೆಲ್  ಅವರ ತಂದೆ ಕೂಡ ಡ್ರಗ್ ಡೀಲರ್ ಆಗಿದ್ದು, ಆತನ ಸ್ನೇಹದೊಂದಿಗೆ ಈತ ಆತನ ಪುತ್ರಿಯನ್ನು ವಿವಾಹವಾಗಿದ್ದ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದಲ್ಲದೆ ಜೋಕ್ವಿನ್ ಚಾಪೊ ಗೆ ಓರ್ವ ಪ್ರೇಯಸಿ ಕೂಡ ಇದ್ದು, ಆಕೆಯ ಹೆಸರು ಅಗಸ್ಟಿನಾ ಕ್ಯಾಬನಿಲ್ಲಾಸ್ ಅಕೋಸ್ಟಾ. ತುಂಬಾ ಸಂಶಯ ಮತ್ತು ಆಸೂಯೆಯ ವ್ಯಕ್ತಿಯಾಗಿರುವ ಈತನಿಗೆ ತನ್ನ ಪ್ರೇಯಸಿ ಮತ್ತು ಪತ್ನಿ ಮೇಲೆ ಎಲ್ಲಿಲ್ಲದ ಶಂಕೆ.
ಇಬ್ಬರ ಮೇಲಿನ ಶಂಕೆಯಿಂದ ಇಬ್ಬರಿಗೂ ಎಂಕ್ರಿಪ್ಟೆಡ್ ಫೋನ್ ನೀಡಿ ಅದರ ಮೂಲಕ ಇವರಿಬ್ಬರ ಮೇಲೆ ಗೂಢಚರಿಕೆ ನಡೆಸುತ್ತಿದ್ದ. ಇದಕ್ಕಾಗಿಯೇ ಈತ ಪರಿಣಿತ ವ್ಯಕ್ತಿಯೊಬ್ಬನನ್ನು ಕೂಡ ನೇಮಿಸಿಕೊಂಡಿದ್ದನಂತೆ. ಇನ್ನು ತನ್ನ ಹೆಣ್ಣು ಮಕ್ಕಳನ್ನೂ ಜೋಕ್ವಿನ್ ಚಾಪೊ ಮಾದಕ ದ್ರವ್ಯ ಲೋಕದ ರಾಣಿಯರನ್ನಾಗಿ ಮಾಡಬೇಕು ಎಂದು ಕೊಂಡಿದ್ದನಂತೆ. ಈ ಬಗ್ಗೆ ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
1 ವರ್ಷದ ಮಗಳಿಗೆ ಎಕೆ 47 ಗಿಫ್ಟ್
ಅಲ್ಲದೆ ಒಮ್ಮೆ ತನ್ನ ಪತ್ನಿಗೆ ಸಂದೇಶ ಕಳುಹಿಸಿದ್ದ ಚಾಪೋ, ತನ್ನ ಕಿರಿಯ ಮಗಳು ತುಂಬಾ ಬುದ್ಧವಂತಳಾಗಿದ್ದು, ಆಕೆಗೆ ಎಕೆ 47 ಬಂದೂಕನ್ನು ಉಡುಗೊರೆಯಾಗಿ ನೀಡಬೇಕು ಎಂದು ಕೊಂಡಿದ್ದ ವಿಚಾರವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಪತ್ನಿಗೆ ಚಾಪೋ ಸಂದೇಶ ರವಾನಿಸಿದ್ದಾಗ ಆಕೆಗಿನ್ನೂ 1 ವರ್ಷ ವಯಸ್ಸಾಗಿತ್ತಷ್ಟೇ.

 ಆತ ಪತ್ನಿ, ಪ್ರೇಯಸಿಗೆ ನೀಡಿದ್ದ ಬ್ಲಾಕ್ ಬೆರ್ರಿ ಫೋನ್ ನಿಂದಲೇ ಸಾಕ್ಷ್ಯ ಸಂಗ್ರಹ
ಇನ್ನು ಪತ್ನಿ ಮತ್ತು ಪ್ರೇಯಸಿ ಮೇಲೆ ನಿಗಾ ಇಡಲು ಈತ ನೀಡಿದ್ದ ಎಂಕ್ರಿಪ್ಟೆಡ್ ಬ್ಲಾಕ್ ಬೆರ್ರಿ ಫೋನ್ ಗಳಿಂದಲೇ ಈತನ ವಿರುದ್ಧದ ಸಾಕ್ಷ್ಯಗಳನ್ನು ಎಫ್ ಬಿಐ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಅದರಿಂದಲೇ ಈತ ಅಮೆರಿಕಕ್ಕೆ ಸುಮಾರು 155 ಟನ್ ಮಾದಕ ದ್ರವ್ಯ ಕಳ್ಳ ಸಾಗಣೆ ಮಾಡಿರುವ ವಿಚಾರ ತಿಳಿದುಬಂದಿದೆ. ಈ ಹಿಂದೆ 2 ಬಾರಿ ಈತನ ಬಂಧನವಾಗಿತ್ತಾದರೂ ಈತ ಎರಡು ಬಾರಿ ಚಾಣಾಕ್ಷತನದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT