ವಿದೇಶ

ಇಂಡೋನೇಷಿಯಾದಲ್ಲಿ ಮತ್ತೆ ಭೂಕಂಪ: 6.4 ತೀವ್ರತೆ ದಾಖಲು

Raghavendra Adiga
ಜಕಾರ್ತಾ: ಮಂಗಳವಾರ ಇಂಡೋನೇಷಿಯಾ ಕರಾವಳಿ ಭಾಗದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಬೆಳಗಿನ ಜಾವ ಈ ಭೂಕಂ ಸಂಭವಿಸಿದ್ದು ಇದುವರೆಗೆ ಯಾವುದೇ ಜೀವಹಾನಿ, ಸ್ವತ್ತು ನಾಶದ ಬಗ್ಗೆ ವರದಿ ಬಂದಿಲ್ಲ.
ಭೂಕಂಪ ಸಂಭವಿಸಿದ ಬಳಿಕ ಇಂಡೋನೇಷಿಯಾ ಹವಾಮಾನ ಇಲಾಖೆ ಯಾವುದೇ ರೀತಿಯ ಸುನಾಮಿ ಎಚ್ಚರಿಕೆ ನೀಡಿಲ್ಲ.
ವೈಂಗಾಪು ನಗರದಿಂದ 150 ಕಿ.ಮೀ. ಪಶ್ಚಿಮದ ನೈಋತ್ಯದಲ್ಲಿನ ಸುಂಬಾ ದ್ವೀಪದಲ್ಲಿ ಸಾಗರದ ತಳದಲ್ಲಿ ಭೂಕಂಪದ ಕೇಂದ್ರವಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಇನ್ನು ಮೊದಲ ಭೂಕಂಪ ಸಂಭವಿಸಿ ಕೆಲವೇ ನಿಮಿಷಗಳಲ್ಲಿ ಅದೇ ಭಾಗದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ್ದು  5.2 ತೀವ್ರತೆ ಸ್ವರೂಪದ ಭೂಕಂಪ ಇದಾಗಿತ್ತು.
ಕಳೆದ ಡಿಸೆಂಬರ್ ನಲ್ಲಿ ಜ್ವಾಲಾಮುಖಿಯೊಂದು ಕ್ರಿಯಾಶೀಲಗೊಇಂಡು ಉಂತಾಗಿದ್ದ ಭೂಕಂಪದ ವೇಳೆ 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
SCROLL FOR NEXT